Bengaluru 25°C
Ad

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ : ಮೇ 31 ಕೊನೆಯ ದಿನ

ಉದ್ಯೋಗ ಹುಡುಕಾಟದಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬಂಧನ್‌ ಬ್ಯಾಂಕ್‌ ದೇಶಾದ್ಯಂತ ಖಾಲಿ ಇರುವ 31 ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ

ಬೆಂಗಳೂರು: ಉದ್ಯೋಗ ಹುಡುಕಾಟದಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬಂಧನ್‌ ಬ್ಯಾಂಕ್‌ ದೇಶಾದ್ಯಂತ ಖಾಲಿ ಇರುವ 31 ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ.

ವಿದ್ಯಾರ್ಹತೆ ಮತ್ತು ವಯೋಮಿತಿ
ದ್ವಿತೀಯ ಪಿಯುಸಿ ಪಾಸಾದವರು, ಪದವಿ ಪಡೆದವರು ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿದರವರು ಅರ್ಜಿ ಸಲ್ಲಿಬಹುದು. ಅಭ್ಯರ್ಥಿಗಳು ಕಂಪ್ಯೂಟರ್‌ ಜ್ಞಾನ ಹೊಂದಿರುವುದು ಕಡ್ಡಾಯ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಅಂದರೆ ಅಭ್ಯರ್ಥಿಗಳು 1994ರ ಏಪ್ರಿಲ್‌ 3 ಮತ್ತು 2006ರ ಏಪ್ರಿಲ್‌ 3ರೊಳಗೆ ಜನಿಸಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ
ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆನ್‌ಲೈನ್‌ ಮೂಲಕ ಸಂದರ್ಶನ ನಡೆಯಲಿದೆ. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಕಾರ್ಯ ವೈಖರಿ
ಆಯ್ಕೆಯಾಗುವ ಉದ್ಯೋಗಿಗಳು ಗ್ರಾಹಕರ ಖಾತೆಗಳನ್ನು ನಿರ್ವಹಿಸುವುದು, ಹಣ ವರ್ಗಾವಣೆಗಳು ಮತ್ತು ಠೇವಣಿಗಳನ್ನು ಪ್ರಕ್ರಿಯೆ ನಡೆಸುವುದು, ಡ್ರಾಫ್ಟ್‌ ಮತ್ತು ಚೆಕ್‌ ನೀಡುವುದು, ಲಾಕರ್‌ಗಳ ನಿರ್ವಹಣೆ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು, ಬ್ಯಾಂಕಿನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದು, ಕ್ಯಾಶ್ ನಿರ್ವಹಣೆ ಮುಂತಾದ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಉದ್ಯೋಗದ ಸ್ಥಳ: ಭಾರತಾದ್ಯಂತ.

ಬ್ಯಾಂಕ್‌ ಬಗ್ಗೆ
ಕೋಲ್ಕತ್ತಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಂಧನ್‌ ಬ್ಯಾಂಕ್‌ ದೇಶದ 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಬ್ಯಾಂಕ್‌ಗೆ ಸುಮಾರು 2.51 ಕೋಟಿ ಗ್ರಾಹಕರಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
ಮೊದಲು ನಿಮ್ಮ ಹೆಸರು ನೋಂದಾಯಿಸಿ.
ಈಗ ಕಂಡುಬರುವ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್‌, ಸಹಿ, ಫೋಟೊ ಅಪ್‌ಲೋಡ್‌ ಮಾಡಿ.
ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
ಹೆಚ್ಚಿನ ವಿವರಗಳಿಗೆ ಎಚ್‌ಆರ್‌ ವಿಭಾಗದ ಫೋನ್‌ ನಂಬರ್‌: 7501496783 ಅಥವಾ ಇಮೇಲ್‌ [email protected] ಅನ್ನು ಸಂಪರ್ಕಿಸಿ

Ad
Ad
Nk Channel Final 21 09 2023
Ad