Bengaluru 23°C
Ad

ಬಿಗ್ ಟ್ವಿಸ್ಟ್; ಕೇವಲ 2 ಸಾವಿರ ರೂಪಾಯಿಗೆ ಪ್ರಭುದ್ದ್ಯಾ ಹತ್ಯೆ ಮಾಡಿದ್ದ ಅಪ್ರಾಪ್ತ !

Died (1)

ಬೆಂಗಳೂರು:  ನಗರದಲ್ಲಿ ನಡೆದ ಯುವತಿ ಪ್ರಭುದ್ದ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತ ಬಾಲಕನೊಬ್ಬ ಕೇವಲ 2 ಸಾವಿರ ರೂಪಾಯಿ ವಿಚಾರಕ್ಕೆ ಯುವತಿಯ ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಮೇ 15 ರಂದು 20 ವರ್ಷದ ಪ್ರಭುದ್ಧ್ಯಾ ಮೃತದೇಹ ಮನೆಯ ಬಾತ್‍ರೂಂನಲ್ಲಿ ಪತ್ತೆ ಆಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಂತಾ ಪೊಲೀಸರು ಪರಿಗಣಿಸಿದ್ದರು. ಆದರೆ ಮಗಳ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಈ ಸಂಬಂಧ ತನಖೆ ನಡೆಸಿದ ಪೊಲೀಸರಿಗೆ ಇದೀಗ ಕೊಲೆ ರಹಸ್ಯ ಹೊರಬಂದಿದೆ.

ಕೊಲೆ ಮಾಡಿದ ಅಪ್ರಾಪ್ತ ತನ್ನ ಸ್ನೇಹಿತನ ಕನ್ನಡಕ ಡ್ಯಾಮೇಜ್ ಮಾಡಿದ್ದನು. ಇದನ್ನು ರಿಪೇರಿ ಮಾಡಿಸಿಕೊಡುವಂತೆ ಸ್ನೇಹಿತ ಪಟ್ಟು ಹಿಡಿದಿದ್ದನು. ಹಾಗಾಗಿ ಅಪ್ರಾಪ್ತ ಪ್ರಬುದ್ಧ್ಯಾ ಮನೆಗೆ ಬಂದಿದ್ದನು. ಹೀಗೆ ಬಂದವನೇ ಪ್ರಭುದ್ಧ್ಯಾ ಪರ್ಸ್‍ನಿಂದ 2 ಸಾವಿರ ರೂ. ಎಗರಿಸಿದ್ದಾನೆ. ಈ ವಿಚಾರ ಪ್ರಭುದ್ಧ್ಯಾ ಗಮನಕ್ಕೆ ಬಂದಿದ್ದು, ಆಕೆ ಬಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಆಗ ಬಾಲಕ, ತಪ್ಪಾಯ್ತು ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದಾನೆ. ಹೀಗೆ ಕಾಲು ಹಿಡಿದಾಗ ಪ್ರಭುದ್ಧ್ಯಾ ಆಯಾತಪ್ಪಿ ಬಿದ್ದಿದ್ದಾಳೆ.

ಕೆಳಗಡೆ ಬಿದ್ದ ಕಾರಣ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದು ಮೂರ್ಛೆ ಹೋಗಿ ಪ್ರಜ್ಞೆ ತಪ್ಪಿದ್ದಾಳೆ. ಇದರಿಂದ ಭಯಬಿದ್ದ ಅಪ್ರಪ್ತ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯುವತಿ ಕೈ ಕುಯ್ದಿದ್ದನು. ಕೈಯಲ್ಲಿ ರಕ್ತಸ್ರಾವ ಆಗಿ ಪ್ರಬುದ್ಧ್ಯಾ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಬಹಿರಂಗವಾಗಿದೆ

 

 

Ad
Ad
Nk Channel Final 21 09 2023
Ad