Bengaluru 23°C
Ad

ಹೆತ್ತವರು ಸಾಲ ವಾಪಾಸ್ ಕೊಡದಿದ್ದಕ್ಕೆ ಮಗಳ ಮೇಲೆ ಅತ್ಯಾಚಾರ

Rape of daughter because her parents did not return the loan

ಹೈದರಾಬಾದ್: ಪೋಷಕರು ಸಾಲ ವಾಪಾಸ್ ಕೊಡದಿದ್ದಕ್ಕೆ ಅವರ 13 ವರ್ಷದ ಮಗಳ ಮೇಲೆ ನಾಲ್ವರು ಲೈಂಗಿಕ ದೌರ್ಜನ್ಯ ನಡೆಸಿ, ಮೊಬೈಲ್​ನಲ್ಲಿ ವಿಡಿಯೋ ಮಾಡಿದ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹತ್ತನೇ ತರಗತಿಯ 15 ವರ್ಷದ ಬಾಲಕ ಹಾಗೂ 19 ರಿಂದ 22 ವರ್ಷದೊಳಗಿನ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಾಲಕಿಯ ಪೋಷಕರು 2 ಲಕ್ಷ ರೂಪಾಯಿಗಳನ್ನು ಸಾಲ ಕೊಡಬೇಕಾಗಿತ್ತು. ಆದರೆ ಕೊಟ್ಟಿರಲಿಲ್ಲ. ಇದಕ್ಕೆ ಪ್ರತೀಕಾರವಾಗಿ 7ನೇ ತರಗತಿ ರಿಸಲ್ಟ್ ನೋಡಲು ಶಾಲೆಗೆ ಹೋಗಿದ್ದ ಬಾಲಕಿಯನ್ನು, ಆರೋಪಿಗಳು ಶಾಲಾ ಕೊಠಡಿಯೊಳಗೆ ಎಳೆದುಕೊಂಡು ಹೋಗಿ ಅಪ್ರಾಪ್ತನು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ಉಳಿದವರು ಇದನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗಿದೆ.

ದೌರ್ಜನ್ಯದ ವಿಡಿಯೋ ಬಳಸಿ ಬಾಲಕಿಯ ಪೋಷಕರಿಗೆ 2 ಲಕ್ಷ ಹಣ ಕೊಡಿ ಎಂದು ಬ್ಲಾಕ್‌ಮೇಲ್ ಮಾಡಿಲು ಶುರು ಮಾಡಿದ್ದಾರೆ. ಇನ್ನು ಯಾವಾಗ ವಿಡಿಯೋ ಹರಿದಾಡಲು ಶರುಮಾಡಿತೋ ಅವಾಗ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೇಸ್​ ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ​ ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023
Ad