News Karnataka Kannada
Saturday, May 04 2024
ಕ್ಯಾಂಪಸ್

ಮಂಗಳೂರು: ಸಿಎಫ್ಎಎಲ್ ಪಿಯು ಕಾಲೇಜು ವಿದ್ಯಾರ್ಥಿಗಳು KVPY ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ತೇರ್ಗಡೆ

KVPY Aptitude Test
Photo Credit : By Author

ಮಂಗಳೂರು:  ಸಿಎಫ್ಎಎಲ್ ಪಿಯು ಕಾಲೇಜು ವಿದ್ಯಾರ್ಥಿಗಳು ಕೆವಿಪಿವೈ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಎಸ್ಎ ವಿಭಾಗದಲ್ಲಿ ಮುರಳೀಧರ್ ರಾವ್ ಅಖಿಲ ಭಾರತ ಶ್ರೇಣಿ ಎಐಆರ್ 5 ನೇ ಸ್ಥಾನ ಗಳಿಸಿದ್ರೆ, ಇತರ ವಿಭಾಗದ ಆರು ವಿದ್ಯಾರ್ಥಿಗಳು ವಿವಿಧ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಿಎಫ್ಎಎಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಿಜಯ್ ಮೋರಸ್ ತಿಳಿಸಿದ್ದಾರೆ.

ಮಂಗಳೂರಿನ ಬಿಜೈ ಕಾಪಿಕಾಡ್ ನ ಸಿಎಫ್ಎಎಲ್ ಸಂಸ್ಥೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಈ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾಗ್ತಾ ಇದ್ದು ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆಯಾತ್ತಾ ಇದ್ದರೆ ಮಾತ್ರವಲ್ಲದೆ ಸಿಎಫ್ಎಎಲ್ ಸಂಸ್ಥೆಯ ಹೆಸರನ್ನು ಭಾನೆತ್ತರಕ್ಕೆ ಕೊಂಡುಯ್ಯವಲ್ಲಿ ಯಶಸ್ವಿ ಆಗ್ತಾ ಇದ್ದಾರೆ.

ಇನ್ನೂ ಇತ್ತೀಚಿಗೆ ಆಯೋಹಿಸಲಾಗಿದ್ದ ಕೆವಿಪಿವೈ ಪರೀಕ್ಷೆಯಲ್ಲಿ ದೇಶ ವಿದೇಶಗಳ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದು ಸಿಎಫ್ಎಎಲ್ ಸಂಸ್ಥೆಯ ಏಳು ವಿದ್ಯಾರ್ಥಿಗಳು ಅತ್ಯುತ್ತಮ ಅಂಕದಲ್ಲಿ ತೇರ್ಗಡೆ ಆಗಿದ್ದಾರೆ.

ಈ ಪೈಕಿ ಎಸ್ಎ ವಿಭಾಗದಲ್ಲಿ ಅಖಿಲ ಭಾರತ ಶ್ರೇಣಿಯ ೫ ನೇ ಸ್ಥಾನವನ್ನು ಮುರಳೀಧರ್ ರಾವ್, ಎಐಆರ್ ೫೮೪ ನೇ ಸ್ಥಾನದಲ್ಲಿ ಸಮುಂತ್ ಮಾರ್ಟಿಸ್, ಎಸ್ಎಕ್ಸ್ ವಿಭಾಗದಲ್ಲಿ ಎಐಆರ್ 65 ನೇ ಸ್ಥಾನದಲ್ಲಿ ಎಸ್ ಪ್ರಣವ್ , ಎಐಆರ್ 228 ಸ್ಥಾನದಲ್ಲಿ ಸಂಜನಾ ಡಿ.ಎಸ್, ಎಐಆರ್ 1088ನೇ ಸ್ಥಾನದಲ್ಲಿ ರಾಧಿಕಾ, ಎಐಆರ್ 1627ನೇ ಸ್ಥಾನದಲ್ಲಿ ಶ್ರೇಯಸ್ ಅಡಿಗ, ಎಐಆರ್ 1665 ನೇ ಸ್ಥಾನದಲ್ಲಿ ಆರ್ಯನ್ ಅಜಿತ್ ದೇವ್ ಅವರು ಈ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ದೇಶದ ಅತೀ ಉನ್ನತ ಮಟ್ಟದ ಕಂಪನಿಗಳ ಮುಖ್ಯಸ್ಥರಾಗಿಯು ಸೇವೆ ಸಲ್ಲಿಸಲಿರುವ ಎಂದವರು ಹೇಳಿದರು.

ಈ ವೇಳೆ ಸಿಎಫ್ಎಎಲ್ ಸಂಸ್ಥೆಯ ಸಂಸ್ಥಾಪಕರಾದ ಸೆವೆರಿನ್ ರೊಸಾರಿಯೋ, ಸಂಸ್ಥೆಯ ಉಪ ಪ್ರಾಂಶುಪಾಲ ಗೌರೀಶ್ ರಾಜ್, ಸಂಸ್ಥೆಯ ಮ್ಯಾಥ್ ಪ್ರೋಗ್ರಾಂ ಕಾರ್ಡಿನೇಟರ್ ಫೆರ್ಡಿಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.

ಕೆವಿಪಿವೈ ಅಂಕಗಳನ್ನು ಸ್ವೀಕರಿಸುವ ಕಾಲೇಜುಗಳ ಪಟ್ಟಿ

  • ಸಿವಿ ರಾಮನ್ ಗ್ಲೋಬಲ್ ಯೂನಿವರ್ಸಿಟಿ, (CGU) ಭುವನೇಶ್ವರ
  • ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ದ್ರರ್ಮೇಷನ್ ಟೆಕ್ನಾಲಜಿ, (IIIT) ಹೈದರಾಬಾದ್
  • ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER)
  • ಭಾರತೀಯ ವಿಜ್ಞಾನ ಸಂಸ್ಥೆ, (IISc) ಬೆಂಗಳೂರು
  • ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ. (IISER) ಭೋಪಾಲ್‌
  • ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಮೊಹಾಲಿ
  • ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ತಿರುವನಂತಪುರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು