News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಕಾಡಾನೆಗಳ ದಾಳಿಗೆ ಅಪಾರ ಕೃಷಿಹಾನಿ

Huge damage to agriculture due to wild elephant attacks
Photo Credit : By Author

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು ಎಂಬಲ್ಲಿ ಅನಂತರಾವ್, ಪ್ರಕಾಶ್ ನಾರಾಯಣ ರಾವ್, ರವೀಂದ್ರ ರಾವ್ ಇವರ ಕೃಷಿ ತೋಟಗಳಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಸುಮಾರು 130 ಅಡಕೆ ಮರ, 6 ತೆಂಗಿನ ಮರ ಹಾಗೂ ನೂರಾರು ಬಾಳೆಗಿಡಗಳನ್ನು ಧ್ವಂಸಮಾಡಿವೆ.

ಮರಿಯಾನೆ ಸಹಿತ ಆರರಿಂದ ಏಳು ಕಾಡಾನೆಗಳು ತೋಟಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷಾಂತರ ರೂ.ಹಾನಿ
ಈ ವರ್ಷ ಜನವರಿ ಬಳಿಕ ಇವರ ಕೃಷಿ ತೋಟಗಳಿಗೆ ಒಂಟಿಸಲಗ, ಹಿಂಡು ಸಹಿತ 10ಕ್ಕಿಂತ ಅಧಿಕ ಬಾರಿ ಆನೆಗಳು ದಾಳಿ ಇಟ್ಟಿದ್ದು ಒಂದು ಸಾವಿರದಷ್ಟು ಅಡಕೆ ಮರ, 50 ತೆಂಗಿನಮರ,ಅಪಾರ ಪ್ರಮಾಣದ ಬಾಳೆ ಕೃಷಿ ನಾಶವಾಗಿ ಲಕ್ಷಾಂತರ ರೂ.ಮೌಲ್ಯದ ಹಾನಿ ಉಂಟಾಗಿದೆ.

ಈ ಪ್ರದೇಶದಲ್ಲಿ ಆನೆ ದಾಳಿ ತಡೆಗಟ್ಟಲು ಕೃಷಿಕರು ಮುಂಜಾಗ್ರತೆ ಕೈಗೊಂಡರೂ ನಿರಂತರ ದಾಳಿ ಮುಂದುವರೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇಲ್ಲಿನ ಕೃಷಿಕರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು