News Karnataka Kannada
Tuesday, May 07 2024
ಕ್ಯಾಂಪಸ್

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ

International Seminar at St. Aloysius College
Photo Credit : By Author

ಮಂಗಳೂರು: ‘ಕೃತಕ ಬುದ್ಧಿವಂತಿಕೆ’ ಎನ್ನುವುದು ಮಾನವನಿರ್ಮಿತ ಮಾನವನಂತಹ ಯಂತ್ರದಲ್ಲಿ ಕೃತಕವಾಗಿ ಉತ್ಪತ್ತಿಯಾಗುವ ಬುದ್ಧಿಮತ್ತೆಯಾಗಿದೆ. ಇಂದು ಕೃತಕ ಬುದ್ಧಿವಂತಿಕೆ  ಮತ್ತು ಸಂಬಂಧಿತ ಕ್ಷೇತ್ರಗಳು ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಅತ್ಯಂತ ಸಕ್ರಿಯವಾದ ಕೇಂದ್ರಗಳಲ್ಲಿ ಒಂದಾಗಿದೆ. 2020 ರ ಅಂದಾಜಿನ ಪ್ರಕಾರ, 37 ದೇಶಗಳಲ್ಲಿ ಕನಿಷ್ಠ 72 ಸಕ್ರಿಯ ಎ ಐ- ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಯ ಯೋಜನೆಗಳಿವೆ.

ರೋಬೋಟಿಕ್ಸ್ ಮತ್ತು ಹ್ಯುಮನಾಯ್ಡ್‌ಗಳಲ್ಲಿ (ಮಾನವರೂಪಿ ರೋಬೋಟ್) ಅದರ ಅನ್ವಯದೊಂದಿಗೆ ಕೃತಕ ಬುದ್ಧಿವಂತಿಕೆ ಒಂದು ಕ್ರಾಂತಿಯನ್ನು ತರುತ್ತಿದೆ, ಇದರ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರವನ್ನು ಮೀರಿ ಮಾನವನ ಅಸ್ತಿತ್ವ ಮತ್ತು ಜೀವನದ ಅನೇಕ ಪ್ರಮುಖ ಅಂಶಗಳ ಮೇಲೆ  ಪರಿಣಾಮ ಬೀರುವ ನಿರೀಕ್ಷೆಯಿದೆ, ಇದು ಸೂಕ್ತವಲ್ಲದಿರಬಹುದು. ಏಕೆಂದರೆ ಈ ಕ್ರಾಂತಿಯ ಪರಿಣಾಮವಾಗಿ, ಉನ್ನತ-ಗುಣಮಟ್ಟದ ಕೃತಕ ಬುದ್ಧಿವಂತಿಕೆ ಮತ್ತು ಇತರ ತಾಂತ್ರಿಕ ವರ್ಧನೆಗಳನ್ನು ಹೊಂದಿರುವ ಮಾನವರೂಪಿ ರೋಬೋಟ್‍ಗಳು, ವಿಶೇಷವಾಗಿ ಪ್ರಪಂಚದಾದ್ಯಂತ ಸಾಮಾನ್ಯ
ಉದ್ಯೋಗಗಳಲ್ಲಿ ತೊಡಗಿರುವ ಜನರನ್ನು ಕೌಶಲ್ಯರಹಿತರನ್ನಾಗಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಸಾಮಾನ್ಯ ಜನರನ್ನು ಮೀರಿಸಬಹುದೆಂಬ ಭಯ ಕೂಡ ಇದೆ.

ಆದರೆ ಈ ಹೊಸ ಉದ್ಯಮವು ಬಾಹ್ಯಾಕಾಶ ಪರಿಶೋಧನೆ, ಸುಧಾರಿತ ವೈದ್ಯಕೀಯ ಮಧ್ಯಸ್ಥಿಕೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಸಂಬಳದೊಂದಿಗೆ ಕೆಲವು ಆಕರ್ಷಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಎ ಐ-ರೋಬೋಟಿಕ್ ಕ್ರಾಂತಿಯ ಹೆಚ್ಚುತ್ತಿರುವ ಪ್ರಾಮುಖ್ಯತೆಗೆ ಮತ್ತೊಂದು ಕಾರಣವೆಂದರೆ ಎ ಐ-ಚಾಲಿತ ರೋಬೋಟ್‌ಗಳು ಮತ್ತು ಮಾನವರೂಪಿ ರೋಬೋಟ್ಗಳ ವ್ಯಾಪಕ ಬಳಕೆ.

ಅನೇಕ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ರೋಬೋಟ್‌ಗಳ ಉದ್ದದ ಸರಪಳಿಯೇ ಇದೆ. ಈ ಎಲ್ಲಾ ಬೆಳವಣಿಗೆಗಳ ಸಮೂಹವು ಮಾನವ ಜೀವನದ ವಿವಿಧ ಹಂತಗಳಲ್ಲಿನ ಚಟುವಟಿಕೆಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ, ಎ ಐ-ಚಾಲಿತ ರೋಬೋಟ್‌ಗಳು ಮತ್ತು ಮಾನವರೂಪಿ ರೋಬೋಟ್ಗಳ ಎಲ್ಲಾ ಪ್ರತಿಪಾದಕರು ಮತ್ತು ಪ್ರವರ್ತಕರು, ತಮ್ಮ ಉತ್ಪನ್ನಗಳು `ಯಂತ್ರಗಳು ಮಾತ್ರ’
ಎಂದು ಒಪ್ಪಿಕೊಳ್ಳುತ್ತಾರೆ.

2017ರಲ್ಲಿ ಹ್ಯಾನ್ಸನ್ ರೊಬೊಟಿಕ್ಸ್‌ನ ಮಾನವರೂಪಿ ರೋಬೋಟ್ ಸೋಫಿಯಾಗೆ ಸೌದಿ ಅರೇಬಿಯಾ ರಾಜ್ಯವು ಪೌರತ್ವವನ್ನು ನೀಡಿತು. ಇದು ಸೌದಿ ಅರೇಬಿಯಾದ ಮಹಿಳೆಯರಿಗೆ ನೀಡಿದ ಗೌರವದ ಸಂಕೇತವೇ ಅಥವಾ ಕೆಲವು ವಿಮರ್ಶಕರು ಗಮನಿಸಿದಂತೆ ವ್ಯಾಪಾರದ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ಕೇ ಎಂದು ಯೋಚಿಸಬೇಕಾಗಿದೆ. ಮಾತ್ರವಲ್ಲ ಈ ರೀತಿಯ ತಂತ್ರಜ್ನಾನವು ಜಾತೀಯತೆಯ ಮೇಲೆ ಸಂಸ್ಕೃತಿಯ ಮೌಲ್ಯಗಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು? ಈ ಎಲ್ಲಾ ವಿಚಾರಗಳಿಗೆ ಸಂಬಂಧಿತ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮತ್ತು ಮಂಗಳೂರಿನ ಕ್ಯಾಥೋಲಿಕ್ ಚೇರ್‌ನ ಸಹಯೋಗದೊಂದಿಗೆ ಭಾರತೀಯ ವಿಜ್ಞಾನ ಮತ್ತು ಧರ್ಮ ಸಂಸ್ಥೆ ಆಯೋಜಿಸಿರುವ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿದ್ವಾಂಸರ ತಂಡವು ವಿಮರ್ಶಾತ್ಮಕವಾಗಿ ವಿವರಣೆ ನೀಡಲಿದೆ. ಇದೊಂದು ವಿನೂತನ ಸಮಕಾಲೀನ ವಿಷಯವಾಗಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರುಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು