Showing 20 of 19289 articles • Page 521 of 965
ಬೇರೆ ಅಂಗಾಂಗಗಳ ಆರೋಗ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬಾಯಿಯ ಆರೋಗ್ಯಕ್ಕೂ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕಿ ಡಾ.ಬಿ.ಮಲ್ಲಿಕಾ ಸಲಹೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ತ್ರಿಪುರ ವಾಸಿನಿ ಆವರಣದಲ್ಲಿ ನವೆಂಬರ್ 24ರಂದು ರಾಮಾನುಜ ವಿಶ್ವವಿದ್ಯೋತ್ಸವ ನಮ್ಮ ನಡೆ ರಾಮಾನುಜರ ಕಡೆಗೆ ಎಂಬ 108 ಶಂಖನಾದ ಮೊಳಗಿಸುವ ಮೂಲಕ ಧಾರ್ಮಿಕ ವೇದಘೋಷ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಯೋಗನರಸಿಂಹ (ಮುರುಳಿ) ತಿಳಿಸಿದರು.
ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲೀಕ ರಘುನಾಥ ಎಂ ಸಾಲಿಯಾನ್ ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಉಳಿದ ನಕ್ಸಲರಿಗಾಗಿ ಶೋಧ ತೀವ್ರಗೊಂಡಿದೆ.
ಯೆನೆಪೊಯ ರಿಸರ್ಚ್ಸೆ೦ಟರ್ನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಪರಿಸರ ಅಧ್ಯಯನ ಕೇ೦ದ್ರವು ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಫೋರೆನ್ಸಿಕ್ ವಿಜ್ಞಾನ ಮತ್ತು ವಿಷಶಾಸ್ತೃ ಇಲಾಖೆಯ ಸಹಯೋಗ ದಲ್ಲಿ “ಹಾವುಗಳ ಪೋಷಕರು: ಪರಿಸರಶಾಸ್ತ್ರ, ಸ೦ರಕ್ಷಣೆ ಮತ್ತು ಹಾವು ಕಚ್ಚಿದವರಿಗೆ ಪರಿಹಾರ ವಿಧಾನಗಳು” ಎ೦ಬ ಶೀರ್ಷಿಕೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜಿಲ್ಲೆಯ ನಾಗಮಂಗಲದ ಕನ್ನಡ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಆಚರಿಸುತ್ತಿದ್ದು ಬೆಳಕಿನ ಮಾಸದಲ್ಲಿ ನಾಟಕೋತ್ಸವ ರಂಗಸಜ್ಜಿಕೆಯು ಕನ್ನಡ ಸಂಘ ಆಯೋಜನೆ ಮಾಡಲಾಗುತ್ತಿದ್ದು,
ಕೊಲ್ಕತ್ತಾದಲ್ಲಿ ನಡೆದ ಸ್ಕೂಲ್ಗೇಮ್ಸ್ ಫೆಡರೇಶನ್ ಆಫ್ಇಂಡಿಯಾ(SGFI) ದ 68ನೇ ರಾಷ್ಟ್ರ ಮಟ್ಟದ ಚೆಸ್ಪಂದ್ಯಾಟದಲ್ಲಿ ಕರ್ನಾಟಕ ತಂಡದ ನಾಯಕನಾಗಿ ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಧನುಷ್ ರಾಮ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಅಖಿಲ ಭಾರತ ಮುಂಡಾಲ ಯುವ ವೇದಿಕೆಯು ಸಮುದಾಯದ ಏಳಿಗೆಗಾಗಿ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುವ ಸಂಘಟನೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನ.26ರಿಂದ ಜರಗಲಿದೆ. 30ರ ವರೆಗೆ ನಡೆಯಲಿದೆ.
ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ಮಾಜಿ ಕಾರ್ಪೊರೇಟರ್ ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ ಮತ್ತಾತನ ಹೆಸರಲ್ಲಿ ಹಿಂಬಾಲಕರು ಹಪ್ತ ವಸೂಲಿ ಮಾಡುತ್ತಿರುವ ಬಗ್ಗೆ ಚಂದ್ರಹಾಸ್ ಪೂಜಾರಿ ವಿಡಿಯೋ ಮೂಲಕ ಚಿತ್ರಿಸಿದ ಹೇಳಿಕೆಯ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ.ಗಳ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.
ಮಣಿಪಾಲದ ವೆಲ್ಕಮ್ ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (ವಾಗ್ಶಾ) ವತಿಯಿಂದ ಮುಂಬರುವ ಕ್ರಿಸ್ಮಸ್ ಹಬ್ಬಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಯಿತು.
ಜೇಸಿಐ ಪಡುಬಿದ್ರೆ ಇದರ 50ನೇ ವರ್ಷಾಚರಣೆ ಪ್ರಯುಕ್ತ ಉಡುಪಿ ಟೂರಿಸಂ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ನ.23 ಮತ್ತು 24ರಂದು ಪಡುಬಿದ್ರಿ ಬೀಚ್ ನಲ್ಲಿ ‘ಕೋಸ್ಟಲ್ ಕಾರ್ನಿವಲ್ ಪಡುಬಿದ್ರಿ- 2024’ ಆಯೋಜಿಸಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಲೆಕುಡಿಯ ಸಮುದಾಯದವರಿಗೆ ಮೀಸಲಿರಿಸಬೇಕು ಎಂದು ರಾಜ್ಯ ಮಲೆಕುಡಿಯ ಸಂಘ ಒತ್ತಾಯಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಅಂಬಾಗಿಲು- ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಯಾವುದೇ ವಾಹನ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.
ವಾಣಿಜ್ಯ ವಿದ್ಯಾರ್ಥಿಗಳು ಪಠ್ಯ ಕಲಿಕೆಯೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಇದು ಮುಂದಿನ ಉದ್ಯೋಗದ ಸಂದರ್ಭದಲ್ಲಿ ಬಹಳ ಉಪಯೋಗವಾಗುತ್ತದೆ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಶ್ರೀ ರಾಜ ಬಿ.ಎಸ್. ನುಡಿದರು.
ಅಮಾಯಕ ಯುವಕನೊಬ್ಬ ತನ್ನ ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನರ ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿ ಆತನ ಎರಡು ಕೈಗಳನ್ನು ಹಿಂದಕ್ಕೆ ಲಾಕ್ ಮಾಡಿ ಹಿಡಿದು ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು.ಬಳಿಕ ಆತ ವಿಡಿಯೋದಿಂದ ಮನನೊಂದು ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾದಿರಿಸಿದ 39 ಸೆಂಟ್ಸ್ ಜಮೀನು ಪ್ರೀಯದರ್ಶಿನಿ ಟ್ರಸ್ಟ್ ಗೆ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ವಿಭಾಗವು “ದಿ ಮಲ್ಯ ರೆಸಿಡೆನ್ಸ್” ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ನ.21, 2024 ರಂದು ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉದ್ಘಾಟಿಸಿತು.