ತುಳುವರ್ಲ್ಡ್ ಫೌಂಡೇಶನ್, ಕಳೆದ 18 ವರ್ಷಗಳಿಂದ ಕರಾವಳಿ ಕರ್ನಾಟಕದ ತುಳು ಸಂಸ್ಕೃತಿ, ಜನಪದ, ಭಾಷೆ, ಮತ್ತು ಪರಂಪರೆಯ ಹಾಗೂ ಕಲೆಗಳ ಅಭಿವೃದ್ಧಿಗಾಗಿ ನಿಭಾಯವಾಗಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದ್ದು, ಈಗ ತನ್ನ ಕೇಂದ್ರ ಕಚೇರಿಯನ್ನು ಕಟೀಲು ಶ್ರೀದುರ್ಗಾ ಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾರಂಭಿಸಿದೆ. ಈ ಮೂಲಕ, ತುಳು ಜನಾಂಗದ ಭವಿಷ್ಯವನ್ನು ಉತ್ತಮಗೊಳಿಸಲು ಮತ್ತಷ್ಟು ಬದ್ಧತೆಯೊಂದಿಗೆ ಕೆಲಸಮಾಡುತ್ತಿದೆ.
ನಮ್ಮ ಸಂಸ್ಥೆ ತುಳು ಮತ್ತು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಲು, ಪ್ರಚಾರ ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ಪ್ರಾಧಾನ್ಯತೆ ನೀಡಲು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಇಲ್ಲಿಯವರೆಗೆ, ನಾವು ತುಳು ಸಾಹಿತ್ಯ ಪುನರುಜ್ಜೀವನ, ಸಾಂಸ್ಕೃತಿಕ ಸಮ್ಮೇಳನಗಳು, ಮತ್ತು ಜಾಗತಿಕ ವೇದಿಕೆಗಳಲ್ಲಿ ತುಳು ಸಮುದಾಯದ ಪರಂಪರೆಯನ್ನು ಎತ್ತಿ ತೋರಿಸುವ ಮಹತ್ವದ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ.
ಈ ನಿಟ್ಟಿನಲ್ಲಿ, ನಮ್ಮ ಸಂಸ್ಥೆ 2025 ಮಾರ್ಚ್ 16 ಆದಿತ್ಯವಾರ ರಂದು ಕಟೀಲು ಶ್ರೀದುರ್ಗಾ ಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ.
ವಿಷಯ: “ತುಳುನಾಡಿನ ಆದಿಮೂಲ ದೈವಗಳು-ಬೆರ್ಮೇರು ಮತ್ತು ಲೆಕ್ಕೇಸಿರಿ.
ಈ ವಿಚಾರ ಸಂಕಿರಣವು ಕರಾವಳಿ ಕರ್ನಾಟಕದ ತುಳು ಸಂಸ್ಕೃತಿಯ ಮೂಲಭೂತ ದೈವಾರಾಧನೆ, ಜಾನಪದ ಪರಂಪರೆ ಮತ್ತು ಅವರ ಪ್ರಾದೇಶಿಕತೆಯನ್ನು ಅಧ್ಯಯನ ಮಾಡುವುದು ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವುದು ಎಂಬ ಗುರಿಯನ್ನು ಹೊಂದಿರುತ್ತದೆ. ಅಧ್ಯಯನ ಪ್ರಬಂಧಗಳು : 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಪ್ರಸ್ತುತಿ. ಸಂಪನ್ಮೂಲ ವ್ಯಕ್ತಿಗಳು : ದೇಶದ ವಿವಿಧೆಡೆಗಳಿಂದ ವಿದ್ವಾಂಸರು ಭಾಗವಹಿಸುವ ನಿರೀಕ್ಷೆ.
ಈ ವಿಚಾರ ಸಂಕಿರಣವನ್ನು ಯಶಸ್ವಿಯಾಗಿ ಮುನ್ನಡೆಸಲು ರೂ. 5,00,000 ವೆಚ್ಚದ ಆಯವ್ಯಯವನ್ನು ನಿಗದಿಪಡಿಸಲಾಗಿದೆ. ನಾವು ತುಳು ಸಮುದಾಯದ ಪ್ರತಿಯೊಬ್ಬರ ಸಹಾಯವನ್ನು ಕೇಳುತ್ತೇವೆ. ನಿಮ್ಮ ಬೆಂಬಲವು ನಮ್ಮ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಲು ಮತ್ತು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ.
ನಿಮ್ಮ ಪ್ರಾಯೋಜನೆ ಮತ್ತು ಆರ್ಥಿಕ ಸಹಾಯವು ಈ ಕಾರ್ಯಕ್ರಮದ ಯಶಸ್ಸಿಗೆ ಅತ್ಯಗತ್ಯವಾಗಿದೆ. ನಿಮ್ಮ ಸದುದ್ದೇಶಗಳಿಂದ ಸಮ್ಮೇಳನದ ಗುರಿ ಯಶಸ್ವಿಯಾಗಲು ನಮ್ಮೊಡನೆ ಕೈಜೋಡಿಸಬೇಕಾಗಿ ವಿನಂತಿಸುತ್ತೇವೆ.
ನಿಮ್ಮ ಸಹಾಯಧನವನ್ನು ಈ ಲಿಂಕ್ ಉಪಯೋಗಿಸಿ ಪಾವತಿಸಿ: https://tuluworld.org.in/index_event_details/bemmerbokkalekkesiri/website

