ಪುಣೆ: ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು  ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ  ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ  ದಿನ ಪೂರ್ತಿ  ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲಾವರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ   ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ  ಮೊದಲಾದ ಕಾರ್ಯಕ್ರಮಗಳು ನಡೆದವು

ಈ  ಸಂದರ್ಭದಲ್ಲಿ ಬೆಂಗಳೂರು ಎಂ ಅರ್ ಜಿ ಗ್ರೂಪ್ ನ ಸಿ ಎಂ ಡಿ ,ಬಂಟ ಸಮಾಜದ ಮೇರು ವ್ಯಕ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಶ್ತಿ ,ಮಂಗಳೂರು ವಿಶ್ವ ವಿದ್ಯಾನೀಲಯದ ಡಾಕ್ಟರೇಟ್ ಪದಕ  ಪುರಸ್ಕ್ರತ,  ವಿಶ್ವ ಖ್ಯಾತಿಯ  ಸಮಾಜ ಸೇವಕ ,ಕೊಡುಗೈ ದಾನಿ, ಎಲ್ಲಾ ಸಮಾಜದ ಶಕ್ತಿಯಾಗಿರುವ  ಸಮಾಜೋದ್ದಾರಕ ಹಾಗೂ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಯವರ ಸಾಧನೆಯ  ದಾರಿ ದೀಪ ,ಪ್ರೇರಣಾ ಶಕ್ತಿಯಾಗಿರುವ ಡಾ .ಕೆ ಪ್ರಕಾಶ್ ಶೆಟ್ಟಿಯವರನ್ನು  ಸುವರ್ಣ ಮಹೋತ್ಸವ ‘’ಬಂಟ ಛತ್ರಪತಿ ‘’ ಎಂಬ ಬಿರುದು ನೀಡಿ ಬಂಟ ಸಮಾಜದ ಇತಿಹಾಸದಲ್ಲೇ ದಾಖಲಾಗುವ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಯವರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ನೆರೆದ  ಸಾವಿರಾರು ಸಂಖ್ಯೆಯ ಸಮಾಜ ಬಾಂಧವರ ನಡುವೆ ವಾದ್ಯಘೋಷ ,ನೃತ್ಯ ,ಪುಷ್ಪಾರ್ಚನೆ ,ವಿವಿದ ಸಮಿತಿಗಳ ಅಭಿನಂದನೆಗಳೊಂದಿಗೆ ಶಾಲು ಹಾರ ಪಂದಪುರ ವಿಟ್ಟಲ್ ರುಕ್ಮಿಣಿ   ಶಿವಾಜಿ ಪ್ರತಿಮೆ ಸನ್ಮಾನ ಪತ್ರ ಸ್ಮರಣಿಕೆ ನೀಡಿ  ಸನ್ಮಾನಿಸಿದರು .ಈ ಸಂದರ್ಭದಲ್ಲಿ ಇವರ  ಸಮಾಜ ಸೇವಾ ಕಾರ್ಯದ ಸಾಕ್ಷಚಿತ್ರವನ್ನು ತೋರಿಸಲಾಯಿತು ,ಡಾ ಪ್ರಕಾಶ್ ಶೆಟ್ಟಿ ಯವರ ಪರಿಚಯ ,ಸನ್ಮಾನ ಪತ್ರವನ್ನು ಕು .ಶ್ರಾವ್ಯ ಸಂತೋಷ್ ಶೆಟ್ಟಿ ಯವರು ಓದಿದರು .

ಈ ಸಂದರ್ಭದಲ್ಲಿ  ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ ಶಶಿಕಿರಣ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ , ರೂಪಿ ಬಾಸ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ ಲಿ ನ ಎನ್ ಬಿ .ಶೆಟ್ಟಿ ,ಬಿಸಿಸಿಐ ಕಾರ್ಯಕರಿಸ ಮಿತಿ ಸದಸ್ಯ ಪಿ ವಿ ಶೆಟ್ಟಿ, ವಿ ಕೆ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ಕರುಣಾಕರ್ ಎಂ ಶೆಟ್ಟಿ ,  ,ಸಾಯಿ ರಾಧ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ರವಿ ಶೆಟ್ಟಿ ,ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ ,ಮಸ್ಕತ್ ಮಲ್ಟಿ ಟ್ರೇಡ್ ಅಂಡ್ ಕನ್ಷ್ಟ್ರಕ್ಶನ್ ಎಲ್ ಎಲ್ ಪಿ ಯ ಸಿ ಎಂ ಡಿ ದಿವಾಕರ್ ಶೆಟ್ಟಿ , ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪ್ಪೇಂದ್ರ ಶೆಟ್ಟಿ ,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ , ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ , ಮಾಲ್ವನ್ ತಡ್ಕ ಹಾಸ್ಪಿಟಾಲಿಟಿ ನ  ಎಂ ಡಿ  ಹಾಲಾಡಿ ಆದರ್ಶ್ ಶೆಟ್ಯಿ ,ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಹಿಳಾ ಕಾರ್ಯಧ್ಯಕ್ಷೆ ಚಿತ್ರಾ ರವಿ ಶೆಟ್ಟಿ,, ಸಾಗರ ಬಂಟರ ಸಂಘದ ಸುಧೀರ್ ಶೆಟ್ಟಿ,ಮುಂಬಯಿ ಬಂಟರ ಸಂಘದ ಸಿಟಿ ರಿಜಿನಲ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಜಯರಾಂ ಶೆಟ್ಟಿ ,ಹುಬಳ್ಳಿ ದಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ ,ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ,ಉಳ್ಳಾಲ ಬಂಟರ ಸಂಘದ  ಮಾಜಿ ಅಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ , ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ   ಯವರು ಉಪಸ್ಥಿತರಿದ್ದರು .ಹಾಗೂ ಬಂಟರ ಸಂಘದ ಉಪಾಧ್ಯಕ್ಷರಾದ  ಎರ್ಮಾಳ್ ಚಂದ್ರಹಾಸ್ ಶೆಟ್ಟಿ ,ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ,ಸುವರ್ಣ ಮಹೋತ್ಸವ  ಸಮಿತಿಯ ಎಲ್ಲ ಸಮಿತಿಗಳ  ಸಮನ್ವಯಕರಾದ ಸುಧೀರ್ ಶೆಟ್ಟಿ ಕಣಂಜಾರು ,ಕೋಶಾಧಿಕಾರಿ ಹೆರ್ಡೆಬೀಡು ಪ್ರಶಾಂತ್ ಶೆಟ್ಟಿ  ,ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ  ಸುಲತಾ ಎಸ್ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು .

ಶ್ರೀ ಶಶಿಕಿರಣ್ ಶೆಟ್ಟಿ ಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್  ಸರ್ವಿಸ್ ಪ್ರಶಸ್ತಿಪ್ರಧಾನ :

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು ,   ಮಂಗಳೂರು  ವಿಶ್ವ ವಿದ್ಯಾನಿಲಯ ಮತ್ತು ನಿಟ್ಟೆ ಡಿಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಷ್ಕ್ರತ ಬೆಲ್ಜಿಯಮ್‌ನ ಕಿಂಗ್ ಫಿಲಿಪ್ ಅವರಿಂದ ಆರ್ಡರ್ ಆಫ್ ಲಿಯೋಪೋಲ್ಡ್  ಕಮಾಂಡರ್ ಪದಕವನ್ನು,ಪಡೆದ  ಬಂಟ ಸಾಮಾಜದ ವಿಶ್ವ ಬಂಟ ದಿಗ್ಗಜ ವಿಶ್ವ ಶ್ರೇಷ್ಟ ಉದ್ಯೋಗಪತಿ ,ಅಗ್ರಮಾನ್ಯ ಸಮಾಜ ಸೇವಾ ಸಾಧಕರಾದ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ .ಆಲ್‌ಕಾರ್ಗೊ ಲಾಜಿಸ್ಟಿಕ್ಸ್‌ನ ಸಿ.ಎಸ್.ಆರ್ ವಿಭಾಗ  ಅವಶ್ಯ ಫೌಂಡೇಶನ್‌ನ ಮುಖ್ಯಸ್ಥರಾದ ಶ್ರೀ ಶಶಿಕಿರಣ್ ಶೆಟ್ಟಿ ಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್  ಸರ್ವಿಸ್ ಪ್ರಶಸ್ತಿಪ್ರಧಾನ ಮಾಡಿ , ವಿವಿದ ಬಗೆಯ ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ರೀತಿಯಲ್ಲಿ  ಪಲ ಪುಷ್ಪ ತರಕಾರಿ ಸೇರಿದಂತೆ ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ  ಶಾಲು ಹಾರ ಬಾಲಾಜಿ  ಮೂರ್ತಿ ಶಿವಾಜಿ ಪ್ರತಿಮೆ ಸನ್ಮಾನ ಪತ್ರ ಸ್ಮರಣಿಕೆ ನೀಡಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ . ಡಾ ಪ್ರಕಾಶ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯಾತಿಗಣ್ಯರು ಸನ್ಮಾನಿಸಿದರು.ಇವರ ಪರಿಚಯ ಹಾಗೂ ಸನ್ಮಾನ ಪತ್ರವನ್ನು ರಾಮಕೃಷ್ಣ ಶೆಟ್ಟಿ ಓದಿದರು.

ಅಶೋಕ್ ಪಕ್ಕಳ ಮಾತು ಕರ್ನೂರು ಮೋಹನ್ ರೈ ಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು .

ವರದಿ ಹರೀಶ್ ಮೂಡಬಿದ್ರಿ ಪುಣೆ