ಪಯ್ಯನ್ನೂರು ನಿವಾಸಿ ಸುರೇ ಶ್ (45) ಕೊಲೆ ಗೀ ಡಾದವರು. ಉಪ್ಪಳ ಪೇಟೆಯಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಸುರೇಶ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ತಡರಾತ್ರಿ ಮೃತಪಟ್ಟರು. ಉಪ್ಪಳ ನಿವಾಸಿ ಸವಾದ್ ಈ ಕೃತ್ಯ ನಡೆಸಿರುವುದಾಗಿ ಪೊಲೀಸರಿ ಗೆ ಮಾಹಿತಿ ಲಭಿಸಿದೆ.  ಸುರೇಶ್ ಉಪ್ಪಳ ದ ಫ್ಲ್ಯಾಟ್ ವೊಂದರ  ಕಾವಲುಗಾರ ರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸುರೇಶ್ ಮತ್ತು ಸವಾದ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಕೊನೆಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.