Showing 20 of 49 posts • Page 1 of 3
ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಯಾದಗಿರಿ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ನಿಮಿತ್ತ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಾಜ್ಞೆ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.
ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.
ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ಕೋರ್ಟ್ ಶಾಕ್ ಕೊಟ್ಟಿದೆ. ಪೋಕ್ಸೋ ಕೇಸ್ನಲ್ಲಿ ಆರೋಪಿಯಾಗಿರುವ ಮಲ್ಲಿಕಾರ್ಜುನ್ ಮುತ್ಯಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.
ಶಿಕ್ಷಕರು ಬೈದಿದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಾಟನ್ ಮಿಲ್ನಲ್ಲಿ ಬೆಂಕಿ ಹೊತ್ತಿಕೊಂಡು 1 ಕೋಟಿ ರೂ. ಮೌಲ್ಯದ 60 ಟನ್ಗೂ ಅಧಿಕ ಕಾಟನ್ ಬೆಂಕಿಗಾಹುತಿ
: ಜಿಲ್ಲೆಯ ಗುರುಮಿಟ್ಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದೊಳಗಿನ ರಸ್ತೆಗಳು ತಗ್ಗು ದಿನ್ನೆಗಳಿಂದ ಕೂಡಿದ್ದು ಸಂಚಾರ ನರಕ ಸದೃಶ್ಯ
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಬಾರಿ ಮಳೆ ಹಿನ್ನೆಲೆ ಬೀಮಾನದಿಗೂ ಅಪಾರ ಪ್ರಮಾಣದ ನೀರು ಹರಿ ಬಿಡಲಾಗುತ್ತಿದೆ ವಡಗೇರಾ ತಾಲೂಕಿನ ಮಾಚನೂರು ಗ್ರಾಮದ ಭೀಮಾನದಿ
ಪಿಡಬ್ಲೂಡಿ ಸಚಿವ ಸತೀಶ ಜಾರಕಿಹೊಳಿ ನೋಡಲೇಬೇಕಾದ ಸ್ಟೋರಿ ಇದಾಗಿದ್ದು, ಪಿಡಬ್ಲುಡಿ ಇಲಾಖೆಯ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಪಿಡಬ್ಲೂಡಿ ಇಲಾಖೆ ಅಧಿಕಾರಿಗಳ ವಸೂಲಿ ದಂಧೆಯ ಕರಾಳ ಮುಖ ಬಯಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ನಾಲ್ವರು ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್ ಆಗಿದ್ದಾರೆ. ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ ಯಾದಗಿರಿ ಪ್ರವಾಸಿಗರು ಪಾರಾಗಿದ್ದಾರೆ.
ಅನ್ಯ ರಾಜ್ಯಗಳಿಂದ ಐಷಾರಾಮಿ ಕಾರು ಖರೀದಿಸಿ ಇಲ್ಲಿ ಆರಾಮವಾಗಿ ಓಡಾಡಿಸಿಕೊಂಡಿದ್ದ ನಾಲ್ಕು ಜನರಿಗೆ ಹಠಾತ್ ಶಾಕ್ ನೀಡಿರುವ ಆರ್ ಟಿಒ ಅಧಿಕಾರಿಗಳು, ನಾಲ್ಕು ವಾಹನಗಳನ್ನು ಜಪ್ತಿ ಮಾಡಿ, 2.50 ಲಕ್ಷ ರೂ.ತೆರಿಗೆ ವಸೂಲಿ ಮಾಡಿದ್ದಾರೆ.
ಗುರುಮಠಕಲ್ ತಾಲೂಕಿನ ಫುಟ್ ಪಾತ್ ಗ್ರಾಮದಲ್ಲಿ ದಾರುಣ ಘಟನೆ ನಡೆದಿದ್ದು, ಮಾದಿಗ ಸಮಾಜದ ಹಿರಿಯರಾದ ನರಸಪ್ಪ (ತಂದೆ ರಾಮಪ್ಪ ಊರಡಿ) ಅವರ ಮೇಲೆ ಅದೇ ಗ್ರಾಮದ ಮುಸ್ಲಿಂ ಸಮಾಜದ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಆರಂಭವಾಗಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಾಮೂಹಿಕ ಕಾಮಗಾರಿಯ ಕೂಲಿ ಹಣವನ್ನು ಬಿಡುಗಡೆ
ಅನೇಕ ವಾರ್ಡ್ಗಳಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಗ್ರಾಮ ಪಂಚಾಯತ್. ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಬೈಕ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಜೇವರ್ಗಿ ರಸ್ತೆ ಬಳಿ ಘಟನೆ ನಡೆದಿದೆ.
ಯವ್ವಾ, ಯಕ್ಕಾ ನಾ ಏನ್ ಮಾಡ್ಲಿ, ಹೋಳಿಗೆ ಮಾಡಿಡು ಅಂತ್ ಹೋದ್ ಮಾಮಾ ಹೀಂಗ ಮೋಸಾ ಮಾಡ್ತಾನಂತ ಗೊತ್ತಿದ್ದಿಲಬೇ ಎಕ್ಕಾ, ನನ್ನ ಹೀಂಗ ನಡು ನೀರಾಗ ಕೈ ಬಿಟ್ಟ ಹೋದರ್ ನಾ ಯಾರ್ ಮುಂದ ಹೇಳ್ಲಿ ಎವ್ವಾ…’.
ಹೋಳಿ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ. ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ವಾಡಗೇರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾನುಪುರ್ ಕೆರೆಯಲ್ಲಿ ನಡೆದಿದೆ.
ಜೆಜೆಎಂ ಯೋಜನೆಯ ಮಾಹಿತಿ ನೀಡುವ ನಾಮಫಲಕ ಅಳವಡಿಕೆ ಹೆಸರಲ್ಲಿ ಜಿಲ್ಲೆಯ ಶಹಾಪುರ ವ್ಯಾಪ್ತಿಯಲ್ಲಿ 36 ಲಕ್ಷ ಅನುದಾನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಲೂಟಿ ಮಾಡಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂದಾಯ, ಸರ್ಕಾರಿ ಜಮೀನು, ದೋರನಹಳ್ಳಿ ಗ್ರಾಮದ ವರವಲಯದಲ್ಲಿರುವ ಶ್ರೀ ಮಾತ್ಮ ಮಹಾತೇಶ್ವರ.
ರಾಜ್ಯದಲ್ಲಿ ಮೀಟರ್ ಬಡ್ಡಿ ದಂದೆ ಕಿರುಕುಳ ಹೆಚ್ಚಾಗುತ್ತಿದ್ದು, ಸಾಲಭಾದೆ ತಾಳಲಾರದೆ ಯುವಕನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಾದಗಿರಿ ನಗರದ ವಿವೇಕಾನಂದ ನಗರದಲ್ಲಿ ನಡೆದಿದೆ.