ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಬಾರಿ ಮಳೆ ಹಿನ್ನೆಲೆ ಬೀಮಾನದಿಗೂ ಅಪಾರ ಪ್ರಮಾಣದ ನೀರು ಹರಿ ಬಿಡಲಾಗುತ್ತಿದೆ ವಡಗೇರಾ ತಾಲೂಕಿನ ಮಾಚನೂರು ಗ್ರಾಮದ ಭೀಮಾನದಿ ಪ್ರವಾಹಕ್ಕೆ ಇಬ್ಬರು ಯುವಕರ ಬಲಿಯಾಗಿದ್ದಾರೆ ಹೋದ ದನಗಾಯಿ ಯುವಕರು ಭೀಮಾನದಿಗೆ ದನಕ್ಕೆ ನೀರು ಕುಡಿಸಲು ಬಂದ ಯುವಕರು ನದಿ ಪಾಲಾಗಿದ್ದಾರೆ.

ರಮೇಶ್ (17) ಸಿದ್ದಪ್ಪ (21)ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿ ಅಪಾರ ಪ್ರಮಾಣದ ನೀರು ಬಿಡುಗಡೆ ಅಪಾಯದ ಮಟ್ಟ ಮೀರಿ ಹರಿಯುತ್ತದೆ ಭೀಮಾನದಿಯಲ್ಲಿ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗಳಿಂದ ಶೋಧ ಕಾರ್ಯ ಬೆಳಗ್ಗೆ 10 ಗಂಟೆಯಿಂದ ಮೃತ ಯುವಕರ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಸ್ಥಳದಲ್ಲಿ ಮುಗಿಲು ಮುಟ್ಟಿದ ಮೃತರ ಕುಟುಂಬಸ್ಥರ ಆಕ್ರಂದನ ಘಟನಾ ಸ್ಥಳಕ್ಕೆ ವಡಗೇರಾ ತಹಸೀಲ್ದಾರ್ ಶ್ರೀಮತಿ ಮಂಗಳಾ. ಎಂ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.