ಯಾದಗಿರಿ: ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ಕೋರ್ಟ್ ಶಾಕ್ ಕೊಟ್ಟಿದೆ. ಪೋಕ್ಸೋ ಕೇಸ್ನಲ್ಲಿ ಆರೋಪಿಯಾಗಿರುವ ಮಲ್ಲಿಕಾರ್ಜುನ್ ಮುತ್ಯಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮುತ್ಯಾ ಅರ್ಜಿ ಸಲ್ಲಿಸಿದ್ದು, ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ತಿರಸ್ಕರಿಸಿದೆ. ಹೀಗಾಗಿ ಮುತ್ಯಾಗೆ ಮತ್ತೆ ಬಂಧನ ಭೀತಿ ಎದುರಾಗಿದೆ.
ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿರುವ ಆರೋಪ ಮಲ್ಲಿಕಾರ್ಜುನ್ ಮುತ್ಯಾ ಮೇಲೆ ಕೇಳಿ ಬಂದಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಕ್ಕಳ ಹಕ್ಕುಗಳ ಆಯೋಗ ಕೇಸ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಈ ಬಗ್ಗೆ ಯಾದಗಿರಿಯ ಗೋಗಿ ಪೋಲಿಸ್ ಠಾಣೆಯಲ್ಲಿ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.
ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಮಲ್ಲಿಕಾರ್ಜುನ್ ಮುತ್ಯಾ ನಾಪತ್ತೆಯಾಗಿದ್ದ. ತೆರೆಮರೆಯಲ್ಲಿ ಇದ್ದುಕೊಂಡೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಇದೀಗ ಅರ್ಜಿ ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ನ್ಯಾಯಾಲಯ, ಮಲ್ಲಿಕಾರ್ಜುನ್ ಮುತ್ಯಾಗೆ ಶಾಕ್ ನೀಡಿದೆ. ಮುತ್ಯಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಮಲ್ಲಿಕಾರ್ಜುನ್ ಮುತ್ಯಾಗೆ ಜಾಮೀನು ನೀಡದಂತೆ ಸರಕಾರಿ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದರು. ವಿಚಾರಣೆ ವೇಳೆ ಮುತ್ಯಾನ ಮೊಬೈಲ್ ಅನ್ನು ತನಿಖಾಧಿಕಾರಿ ಶರಣಗೌಡ ನಾಮಣ್ಣವರ್ ಜಪ್ತಿ ಮಾಡಿದ್ದರು. ಈ ಎಲ್ಲ ಅಂಶಗಳ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ತಿರಸ್ಕರಿಸಿದೆ.
ಸದ್ಯ ಕೇಸ್ ದಾಖಲಾಗುತ್ತಿದ್ದಂತೆ ಮಲ್ಲಿಕಾರ್ಜುನ್ ಮುತ್ಯಾ ತಲೆ ಮರೆಸಿಕೊಂಡಿದ್ದ. ತೆರೆ ಮರೆಯಲ್ಲಿ ಇದ್ದೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಾಮೀನು ಸಿಗುವ ವಿಶ್ವಾಸದಲ್ಲಿ ಇದ್ದ ಮುತ್ಯಾ ಹಾಗೂ ಆತನ ಭಕ್ತರಿಗೆ ಇಂದು ಭಾರೀ ಆಘಾತವಾಗಿದೆ. ಪೊಲೀಸರು ಈಗಲಾದರೂ ಮಲ್ಲಿಕಾರ್ಜುನ್ ಮುತ್ಯಾನ ಬಂಧಿಸುವರೋ, ಇಲ್ಲವೋ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಮಲ್ಲಿಕಾರ್ಜುನ್ ಮುತ್ಯಾ ಅವರು ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಹಪೂರ ತಾಲ್ಲೂಕಿನ ಮಹಲ್ ರೋಜಾ ಗ್ರಾಮದ ಮಠದ ಪೀಠಾಧಿಪತಿ ಅಥವಾ ಸ್ವಯಂ ಘೋಷಿತ ಸ್ವಾಮೀಜಿ/ದೇವಮಾನವ ಎಂದು ಪ್ರಸಿದ್ಧರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ “ನಡೆದಾಡುವ ದೇವರು” ಅಥವಾ “ಅಪ್ಪಾಜಿ” ಎಂದು ಭಕ್ತರು ಕರೆಯುತ್ತಾರೆ. ಸಾಮಾನ್ಯ ಉಡುಪು ಧರಿಸಿ, ಗಡ್ಡ-ಕಾವಿ ಬಟ್ಟೆ ಇಲ್ಲದೆಯೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಅವರನ್ನು ಆರಾಧಿಸುತ್ತಿದ್ದರು. ಸೋಶಿಯಲ್ ಮೀಡಿಯಾ ಮೂಲಕ ದೊಡ್ಡ ಫಾಲೋಯರ್ಸ್ ಪಡೆದಿದ್ದರು
ಮಹಲ್ ರೋಜಾ ಮಠದ ಮುಖ್ಯಸ್ಥರಾಗಿ, ಭಕ್ತರು ಅವರನ್ನು ದೇವರಂತೆ ಪೂಜಿಸುತ್ತಿದ್ದರು. ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದರು ಎಂದು ಹೇಳಲಾಗುತ್ತದೆ. ಆದರೆ 2026ರ ಫೆಬ್ರವರಿ ಕೊನೆಯಲ್ಲಿ ಒಂದು ವಿಡಿಯೋ ವೈರಲ್ ಆಯಿತು. ಅದರಲ್ಲಿ ಅವರು ಒಬ್ಬ ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿತ್ತು. ಇದರಿಂದಾಗಿ ಪೋಕ್ಸೋ ಕಾಯ್ದೆ ಅಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಮಲ್ಲಿಕಾರ್ಜುನ್ ಮುತ್ಯಾ ಸ್ವಲ್ಪ ನಾಪತ್ತೆಯಾಗಿದ್ದ.

