ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಆರಂಭವಾಗಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಾಮೂಹಿಕ ಕಾಮಗಾರಿಯ ಕೂಲಿ ಹಣವನ್ನು ಬಿಡುಗಡೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ( ಪಿಡಿಓ )ಫೋನ್ ಪೇ ಮೂಲಕ ಲಂಚ ಪಡೆದಿದ್ದಾರೆ ಎಂದು ಕೂಲಿ ಕಾರ್ಮಿಕ ಮುಖಂಡ ಸಾಬಣ್ಣ ಚಿನ್ನಿ ವಡಗೇರಾ ಅವರು ಆರೋಪಿಸಿದ್ದಾರೆ.
ಇ.ಓ. ತಾ.ಪಂ. ವಡಗೇರಾ ಮಾನ್ಯ ಸಿ.ಇ.ಓ. ಜಿ.ಪಂ. ಯಾದಗಿರಿ ರವರು ಸ್ಥಳ ತನಿಖೆ ಮಾಡಿ, ಕಾಮಗಾರಿ ಹೋಗಿ ಪರಿಶೀಲಿಸಿ ಹೋದರೂ ಕೂಡಾ ಪಿಡಿಓ ರವರು ಜಿರೋ ಮಾಡಿದ್ದು, ಹಣ ಕೊಡದೇ ಇರುವುದಕ್ಕೆ ಮೋಸ ಮಾಡಿದ್ದಾರೆ.
ಆದ ಕಾರಣ ಸದರಿ ಪಿಡಿಓ ರವರ ಮೇಲೆ ಶಿಸ್ತು ಕ್ರಮ ಜರುಗಿಸಿ, ಹಣ ಕೊಡದೇ ಇರುವುದಕ್ಕೆ ಎನ್.ಎಂ.ಆರ್. ಜಿರೋ ಮಾಡಿರುವ ಪಿಡಿಓ ರನ್ನು ಅಮಾನತ್ತುಗೊಳಿಸಿ, ಕೂಲಿಕಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ಗ್ರಾಮ ಪಂಚಾಯಿತಿಯ ಪಿಡಿಓ ಶರಣಗೌಡ ಊಳ್ಳೆಸೂಗುರು ಅವರು ಮೊದಲನೇ ವಾರದ ಹಣ ಬಿಡುಗಡೆ ಮಾಡಲು 5 ಸಾವಿರದ ಲಂಚದ ಬೇಡಿಕೆ ಇಟ್ಟಿದಾರಂತೆ, ಸ್ಥಳೀಯ ಸಾಬಣ್ಣ ಅವರು. ಸರ್ ನಮಗ್ಗೆ ಅಷ್ಟೊಂದು ದುಡ್ಡು ಕೊಡಲು ಆಗುವುದಿಲ್ಲ ಎಂದು 40 ಜನ ಕೂಲಿ ಕಾರ್ಮಿಕರಲ್ಲಿ ತಲಾ ಐವತ್ತು ರೂಪಾಯಿದಂತೆ ಜಮಾ ಮಾಡಿ 2 ಸಾವಿರ ಮೊನ್ನೆ ರಾತ್ರೋರಾತ್ರಿ 10.36 ನಿಮಿಷಕ್ಕೆ ಪಿಡಿಓ ಅಧಿಕಾರಿಗೆ ಫೋನ್ ಪೇ ಸಾವಿರ ರೂಪಾಯಿ ವರ್ಗಾವಣೆ ಮಾಡಿರುತ್ತಾರೆ. ಇಷ್ಟಾದರೂ ಕೂಡ ಅವರ ನಂಬರಿಗೆ ಫೋನ್ ಪೇ ಮಾಡಿದ್ದೇನೆ ಈಗ ಮತ್ತೆ ಎರಡನೇ ವಾರದ ಹಣ ಬಿಡುಗಡೆಗೆ ಲಂಚ ಕೊಡುವಂತೆ ಕೇಳಿದ್ದರು.
ವಡಗೇರಾ ಗ್ರಾಮ ಪಂಚಾಯತಿಯ ವಡಗೇರಾ ಗ್ರಾಮದ ಸ.ನಂ. 646 ಇವರ ಹೊಲದ ಹತ್ತಿರ ಹೊಸ ಕೆರೆ ಹಳ್ಳದಲ್ಲಿ ಹೂಳೆತ್ತುವ ಕಾಮಗಾರಿ ವರ್ಕ ಕೋಡ್ : 612970 ಇದ್ದು, ಈ ಕಾಂಗಾರಿ ಕೂಲಿಕಾರರಿಂದ ಕೆಲಸ ಮಾಡಲಾಗಿದ್ದು, ಎನ್.ಎಂ.ಆರ್. ತೆಗೆದಿದ್ದು, ಪಿಡಿಓ ರವರು ರೂ. 5000/- ಹಣ ಬಿಲ್ ಪಾವತಿ ಮಾಡಲು ಕೇಳಿದ್ದು, ಇದರಲ್ಲಿ ರೂ. 2000/- ಹಣ ಪಿಡಿಓ ರವರಿಗೆ ಪೋನ್ ಪೇ ಮೂಲಕ ಪಾವತಿಸಿದ್ದು, ಉಳಿದ ಹಣ ಕೊಡದೇ ಇರುವುದಿಕ್ಕೆ ಜಿರೋ ಮಾಡಿ, ನಮಗೆ ಅನ್ಯಾಯ ಮಾಡಿದ್ದು, ದುಡಿದ ಕೂಲಿಕಾರರಿಗೆ ಅನ್ಯಾಯ ಮಾಡಿರುತ್ತಾರೆ.
ನಾವುಗಳು ಹಣ ಕೊಡದ ಕಾರಣ ಎನ್ಎಂಆರ್ ಅನ್ನು ಶೂನ್ಯ ಮಾಡಿದ್ದಾರೆ ಮೊನ್ನೆಯಷ್ಟೇ ಜಿಲ್ಲಾ ಪಂಚಾಯತ್ ಸಿಓ ರವರು ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಕೂಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಒದಗಿಸುವುದರ ಜೊತೆಗೆ ಅವರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವಂತೆ ಹೇಳಿದ್ದಾರೆ ಆದರೆ ಮೇಲಾಧಿಕಾರಿಗಳ ಮಾತಿಗೂ ಬೆಲೆ ಕೊಡದ ಪಿಡಿಓ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಾಕಷ್ಟು ಅವ್ಯವಹಾರ ವಾಗಿದ್ದು ಕೂಡಲೇ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಗೊಳಿಸುವಂತೆ ಕೂಲಿ ಕಾರ್ಮಿಕರ ಮುಖಂಡ ಸಾಬಣ್ಣ ಚಿನ್ನಿ ಒತ್ತಾಯಿಸಿದ್ದಾರೆ.
-ವರದಿ
ಸುಧೀರ್ ಕೋಟಿ ಯಾದಗಿರಿ

