ಯಾದಗಿರಿ: ಹೋಳಿ‌ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ. ಗಂಟೆಗಳ‌ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ವಾಡಗೇರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾನುಪುರ್ ಕೆರೆಯಲ್ಲಿ ನಡೆದಿದೆ.

ವಾಡಗೇರಾ ನಾಯ್ಕಲ್ ಗ್ರಾಮದ ಮೃತ ಬಸವರಾಜ್ (25) ಖಾನಾಪುರ್ ಕೆರೆಯಲ್ಲಿ ಮುಳುಗಿದ್ದ ಯುವಕ. ಈತ ನಾಯ್ಕಲ್ ಗ್ರಾಮದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದನು. ಹೋಳಿ‌ ಸಂಭ್ರಮಾಚರಣೆ ಮುಗಿದ ತಕ್ಷಣನೇ ಪಕ್ಕದ ಊರಿನ ಕಾನಪುರ ಗ್ರಾಮದ ಕೆರೆ ಒಂದರಲ್ಲಿ ಸ್ನಾನ ಮಾಡಲು ಹೋದ ವೇಳೆ ದುರ್ಘಟನೆ ಸಂಭವಿಸಿದೆ.

ಶನಿವಾರ ಸ್ನೇಹಿತರೊಂದಿಗೆ ಹೋಳಿ ಆಚರಣೆ ಮಾಡಿ ಬಳಿಕ ಕೆರೆಗೆ ಈಜಲು‌ ಯುವಕ ಹೋಗಿದ್ದನು. ಯುವಕನಿಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಸತತ ಮೂರುವರೆ. (ತಾಸ್) ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ.

ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಕ ದಳ ಸಿಬ್ಬಂದಿಯಿಂದಲೂ ಯುವಕನ ಪತ್ತೆ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಯುವಕ ಶವವಾಗಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಪ್ರಕರಣ ವಾಡಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.