ಜೆರುಸಲೇಂ: ಹಮಾಸ್ ಭಯೋತ್ಪಾದಕರು ಮತ್ತು ಇಸ್ರೇಲ್ ನಡುವೆ ಘರ್ಷಣೆ ಆರಂಭವಾಗಿ ಹಲವು ದಿನಗಳು ಕಳೆದಿದೆ. ಈ ನಡುವೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲಿನ ಆಸ್ಪತ್ರೆ ಮೇಲೆ ಬಾಂಬ್ ದಾಳಿ ನಡೆಸಿದೆ ಎಂಬ ಆರೋಪ ಎದುರಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮಧ್ಯೆ ಹಮಾಸ್ ಉಗ್ರರು 200ಕ್ಕೂ ಹೆಚ್ಚು ಇಸ್ರೇಲ್ ಸೇರಿ ಅಮೆರಿಕಾದ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಒಂದಿಷ್ಟು ಜನರನ್ನು ಹಮಾಸ್ ಉಗ್ರರಿಂದ ಇಸ್ರೇಲ್ ಸೈನ್ಯ ಬಿಡಿಸಿಕೊಂಡು ಬಂದಿದೆ. ಆದರೆ ಇನ್ನು ಸುಮಾರಷ್ಟು ಜನ ಹಮಾಸ್ ಕೈ ವಶದಲ್ಲಿದ್ದಾರೆ. ಇನ್ನು ಅಮೆರಿಕದ ನಾಗರಿಕರು ಕೂಡ ಹಮಾಸ್ ವಶದಲ್ಲಿದ್ದು, ಇದೀಗ ಇಬ್ಬರು ಅಮೆರಿಕ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ ಎಂದು ಇಸ್ರೇಲ್ ಸೈನ್ಯ ಹೇಳಿದೆ.
ಶುಕ್ರವಾರ ರಾತ್ರಿ ಅಮೆರಿಕದ ಪ್ರಜೆಗಳಾದ ಜುಡಿತ್ ತೈ ರಾನನ್ ಮತ್ತು ಅವರು ಮಗಳು ನಟಾಲಿ ಶೋಷನಾ ರಾನನ್ ಅವರು ಹಮಾಸ್ ಕೈಯಿಂದ ಬಿಡುಗಡೆಗೊಂಡು ಇಸ್ರೇಲ್ಗೆ ಬಂದಿದ್ದಾರೆ ಎಂದು ಇಸ್ರೇಲ್ ಸರ್ಕಾರ ವಿವರಿಸಿದೆ.