News Karnataka Kannada
Saturday, May 11 2024
ವಿದೇಶ

ಲಿಬಿಯಾದಲ್ಲಿ ಡೇನಿಯಲ್‌ ಅಬ್ಬರಕ್ಕೆ ಸಾವನ್ನಪ್ಪಿದವರ ಸಂಖ್ಯೆ 5300

Death toll in Libya's Daniel's death toll rises to 5,300
Photo Credit : News Kannada

ಟ್ರಿಪೊಲಿ: ಲಿಬಿಯಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸನ್ನಿವೇಶ ಸೃಷ್ಟಿಯಾಗಿದ್ದು, ಎರಡು ಅಣೆಕಟ್ಟು ಕುಸಿದು ಸಾವನ್ನಪ್ಪಿದವರ ಸಂಖ್ಯೆ 5300 ಕ್ಕೇ ಏರಿದ್ದು, ನಾಪತ್ತೆಯಾದವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ. ಈಶಾನ್ಯ ಲಿಬಿಯಾದಲ್ಲಿ ಭಾರಿ ಮಳೆಯಿಂದಾಗಿ ಎರಡು ಅಣೆಕಟ್ಟುಗಳು ಕುಸಿದಿದೆ. ಪರಿಣಾಮ 5300ಕ್ಕೂ ಹಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಬಹುದು ಎಂದು ಅಧಿಕಾರಿಗಳು, ಸ್ಥಳೀಯಾಡಳಿತ ತಿಳಿಸಿದೆ.

ಸ್ಟಾರ್ಮ್ ಡೇನಿಯಲ್ ಚಂಡಮಾರುತವು ಲಿಬಿಯಾ ಕರಾವಳಿಗೆ ಅಪ್ಪಳಿಸಿದ್ದು, ಈ ವೇಳೆ ಎರಡು ಅಣೆಕಟ್ಟುಗಳ ಕುಸಿತ ಕಂಡಿವೆ. ಅಲ್ಲದೆ ವಾಡಿ ಡರ್ನಾ ನದಿ ಪ್ರವಾಹದಿಂದ ಹಲವರು ಸಾವನ್ನಪ್ಪಿದ್ದಾರೆ.

ಡೇನಿಯಲ್ ಚಂಡಮಾರುತದಿಂದಾಗಿ ಲಿಬಿಯಾದಲ್ಲಿ ಸಾವನ್ನಪ್ಪಿದ ಈಜಿಪ್ಟಿಯನ್ನರ 87 ಶವಗಳನ್ನು ಈಜಿಪ್ಟ್ ಗೆ ತರಲಾಗಿದೆ ಎಂದು ಈಜಿಪ್ಟ್ ವಲಸೆ ಸಚಿವಾಲಯ ಬುಧವಾರ ತಿಳಿಸಿದೆ. ಮೃತದೇಹಗಳನ್ನು ಈಜಿಪ್ಟ್ ಮಿಲಿಟರಿ ಮೂಲಕ ಸ್ವದೇಶಕ್ಕೆ ತರಲಾಯಿತು ಎಂದು ಸಚಿವಾಲಯ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು