ಹೊಸದಿಲ್ಲಿ: ಗಲ್ವಾನ್ ಘರ್ಷಣೆ ನಂತರವೂ ಚೀನಾ ಎಲ್ಎಎಸಿ ಉದ್ದಕ್ಕೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಉಪಸ್ಥಿತಿ ಹಾಗೆಯೇ ಇದೆ. ಅದೇ ರೀತಿ ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಿದೆ.
2022 ರಿಂದ ಚೀನಾ LAC ಉದ್ದಕ್ಕೂ ಮಿಲಿಟರಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸುತ್ತಿದೆ. ಡೋಕ್ಲಾಮ್ ಬಳಿ ಭೂಗತ ಶೇಖರಣಾ ಸೌಲಭ್ಯಗಳನ್ನು ವ್ಯಾಪಕವಾಗಿ ಅಭಿವೃದ್ಧಿ ಮಾಡುತ್ತಿದೆ. LAC ಯ ಎಲ್ಲಾ ಮೂರು ವಲಯಗಳಲ್ಲಿ ಹೊಸ ರಸ್ತೆ, ನೆರೆಯ ಭೂತಾನ್ನಲ್ಲಿ ವಿವಾದಿತ ಪ್ರದೇಶಗಳಲ್ಲಿ ಹೊಸ ಹಳ್ಳಿಗಳ ರಚನೆ, ಪಾಂಗಾಂಗ್ ಸರೋವರದ ಮೇಲೆ ಎರಡನೇ ಸೇತುವೆ, ಕೇಂದ್ರ ವಲಯದ ಬಳಿ ದ್ವಿ-ಉದ್ದೇಶದ ವಿಮಾನ ನಿಲ್ದಾಣ ಮತ್ತು ಬಹು ಹೆಲಿಪ್ಯಾಡ್ ಗಳನ್ನು ರಚಿಸಿದೆ ಎಂದು ವರದಿ ಹೇಳಿದೆ.
ಚೀನಾ ಪೂರ್ವ ವಲಯದಲ್ಲಿ ಮೂರು ಲಘು-ಮಧ್ಯಮ CAB ಗಳನ್ನು ಮತ್ತು LAC ಯ ಕೇಂದ್ರ ವಲಯದಲ್ಲಿ ಹೆಚ್ಚುವರಿ ಮೂರು CAB ಗಳನ್ನು ನಿಯೋಜಿಸಿದೆ ಎಂದು ಪೆಂಟಗನ್ ವರದಿ ಹೇಳಿದೆ. ನಿಯೋಜಿಸಲಾದ ಬಹುಪಾಲು ಪಡೆಗಳು LAC ಉದ್ದಕ್ಕೂ ಸ್ಥಳದಲ್ಲಿಯೇ ಉಳಿದಿವೆ ಎಂದು ಪೆಂಟಗನ್ ವರದಿ ಹೇಳಿದೆ. ಮೇ 2020 ರಲ್ಲಿ ಎಲ್ಎಸಿ ಉದ್ದಕ್ಕೂ ನಡೆದ ಘರ್ಷಣೆಯಲ್ಲಿ ಭಾರತ ಮತ್ತು ಚೀನಾದ ಹಲವು ಸೈನಿಕರು ಗಾಯಗೊಂಡಿದ್ದರು.