News Karnataka Kannada
Friday, May 03 2024
ವಿದೇಶ

ಮಕ್ಕಳ ಇನ್ಸ್​ಟಾಗ್ರಾಮ್ ವ್ಯಸನ: ಮೆಟಾ ವಿರುದ್ಧ ಕಾನೂನು ಕ್ರಮ

Children's Instagram addiction: Legal action against Meta
Photo Credit : Facebook

ಕ್ಯಾಲಿಫೋರ್ನಿಯಾ: ಸೋಷಿಯಲ್ ಮೀಡಿಯಾಗೆ ಜನರು ಅದೆಷ್ಟು ದಾಸರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಯುವ ಮನಸ್ಸುಗಳಿಗೆ ಒಂದು ರೀತಿ ವ್ಯಸನವಾಗಿ ಹೋಗಿದೆ. ಇದೀಗ ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮೊದಲಾದ ಸೋಷಿಯಲ್ ಮೀಡಿಯ ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ ಜರುಗಿಸಲು ಹೆಜ್ಜೆ ಇಡಲಾಗಿದೆ.

ಯುವ ಜನರ ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗಿರುವ ಮೆಟಾ ಪ್ಲಾಟ್​ಫಾರ್ಮ್ಸ್ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಅಮೆರಿಕದ 50 ರಾಜ್ಯಗಳ ಪೈಕಿ 42 ರಾಜ್ಯಗಳ ಅಟಾರ್ನಿ ಜನರಲ್​ಗಳು ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

“ಲಾಭದ ಉದ್ದೇಶದಿಂದ ಮೆಟಾ ಸಂಸ್ಥೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಯುವ ಜನರು ಮತ್ತು ಹದಿಹರೆಯದ ಮಕ್ಕಳನ್ನು ಸೆಳೆಯುತ್ತಿವೆ. ಸೋಷಿಯಲ್ ಮೀಡಿಯಾಗಳ ಬಳಕೆಯಿಂದ ಮಕ್ಕಳಲ್ಲಿ ಖಿನ್ನತೆ, ಆತಂಕ, ನಿದ್ರಾಹೀನತೆ, ಶೈಕ್ಷಣಿಕ ಅಡಚಣೆ, ನಿತ್ಯಜೀವನ ತೊಡಕು ಇತ್ಯಾದಿಗಳು ಆಗುತ್ತಿರುವುದು ಸಂಶೋಧನೆಯಿಂದ ಸಾಬೀತಾಗಿದೆ ಎಂಬುದು ಅಟಾರ್ನಿ ಜನರಲ್​ಗಳು ಸಲ್ಲಿಸಿರುವ ದೂರಿನಲ್ಲಿರುವ ಸಾರಾಂಶವಾಗಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸರುವ ಮೆಟಾ “ದೂರು ನೀಡುವ ಬದಲು ಅಟಾರ್ನಿ ಜನರಲ್​ಗಳು ಹದಿಹರೆಯದವರು ಬಳಸುವ ಆ್ಯಪ್​ಗಳಿಗೆ ವಯೋಗುಣ ಪ್ರಮಾಣವನ್ನು ಸಿದ್ಧಪಡಿಸಲು ಉದ್ಯಮಗಳೊಂದಿಗೆ ಮಾತನಾಡಬಹುದಿತ್ತು” ಎಂದು ಹೇಳಿಕೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು