News Karnataka Kannada
Monday, April 29 2024
ಆಂಧ್ರಪ್ರದೇಶ

ಕುಡಿದ ಮತ್ತಿನಲ್ಲಿ ಬಾಂಬ್ ಕಚ್ಚಿದ ವ್ಯಕ್ತಿ: ಸಂಪೂರ್ಣವಾಗಿ ಛಿದ್ರಗೊಂಡ ಮುಖ

Man who bit a bomb in an inebriated state: Completely mutilated face
Photo Credit : News Kannada

ಆಂಧ್ರ ಪ್ರದೇಶ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಾಂಬ್​ ಅನ್ನು ಕಚ್ಚಿದ ಪರಿಣಾಮ ಬಾಯಿಯಲ್ಲೇ ಸ್ಫೋಟಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬಂಗಾರುಪಾಲೆಂ ಮಂಡಲದ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ, 35 ವರ್ಷದ ವ್ಯಕ್ತಿಯೊಬ್ಬರು ಕಂಟ್ರಿ ಬಾಂಬ್​ ಅನ್ನು ಕಚ್ಚಿದ ಪರಿಣಾಮ ಅದು ಸ್ಥಳದಲ್ಲೇ ಸ್ಫೋಟಗೊಂಡಿದೆ.

ಘಟನೆಯಲ್ಲಿ ಮುಖವು ಸಂಪೂರ್ಣವಾಗಿ ಛಿದ್ರವಾಗಿತ್ತು. ಸ್ಥಳೀಯರು ಬಂದು ತಕ್ಷಣವೇ ಬಂಗಾರುಪಾಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಚಿರಂಜೀವಿ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಬಂಗಾರುಪಾಲೆಂ ಸಿಐ ನಾಗರಾಜು ರಾವ್ ಅವರು ನೀಡಿರುವ ಮಾಹಿತಿ ಪ್ರಕಾರ, ಮೃತಪಟ್ಟವರನ್ನು ಗದ್ದಂವಾರಿಪಲ್ಲಿ ನಿವಾಸಿ ಎಂ ಚಿರಂಜೀವಿ ಎಂದು ಗುರುತಿಸಲಾಗಿದೆ. ಚಿರಂಜೀವಿ ಪತ್ನಿ ಜತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದರು, ಜತೆಗೆ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದರು, ಕುಡಿತಕ್ಕೆ ದಾಸರಾಗಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಕುಡಿತದ ಅಮಲಿನಲ್ಲಿದ್ದ ಎಂಬುದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು