News Karnataka Kannada
Monday, May 06 2024
ವಿದೇಶ

ಇಸ್ರೇಲ್ ದಾಳಿ: ಗಾಜಾ ಪಟ್ಟಿಯಲ್ಲಿ 1200 ಮಂದಿ ಸಾವು

1,200 killed in Israeli attacks in Gaza Strip
Photo Credit : IANS

ಗಾಜಾ ಪಟ್ಟಿ: ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿಯಾದ್ಯಂತ ಗಾಳಿ, ಸಮುದ್ರ ಮತ್ತು ಭೂಮಿ ಭಾಗದಿಂದ ದಾಳಿ ಆರಂಭಿಸಿದೆ. ಗಾಜಾಪಟ್ಟಿಯ ಕರಾವಳಿ ಎನ್‌ಕ್ಲೇವ್‌ನಲ್ಲಿ ಸಾವಿನ ಸಂಖ್ಯೆ 1,200 ಕ್ಕೇ ಏರಿದೆ. ಗಾಯಗೊಂಡವರ ಸಂಖ್ಯೆ 338,934 ಕ್ಕೆ ಏರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಪ ಆರೋಗ್ಯ ಸಚಿವ ಯೂಸೆಫ್ ಅಬು ಅಲ್-ರಿಶ್, ಹಮಾಸ್ ನಿಯಂತ್ರಿತ ಎನ್‌ಕ್ಲೇವ್‌ನಲ್ಲಿರುವ ಎಲ್ಲಾ ಆಸ್ಪತ್ರೆಯ ಹಾಸಿಗೆಗಳು ರೋಗಿಗಳಿಂದ ಭರ್ತಿಯಾಗಿವೆ ಎಂದು ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿದ್ಯುತ್‌ ಕಡಿತಗೊಂಡಿರುವ ಕಾರಣ ಜನರಿಗೆ ತುರ್ತು ಆರೋಗ್ಯ ಸೇವೆ ನೀಡಲು ಜನರೇಟರ್‌ ಮೂಲದಿಂದ ಕರೆಂಟ್‌ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಗಾಜಾದ ಜನಸಂಖ್ಯೆಯ 600,000 ಮಂದಿ ನೀರಿಲ್ಲದೆ ಪರದಾಡುವಂತಾಗಿದೆ. ಆಸ್ಪತ್ರೆಗಳಲ್ಲಿಯೂ ನೀರಿಲ್ಲದ ಸ್ಥಿತಿ ಇದೆ ಎಂದು ಹೇಳಿದ್ದಾರೆ. ಗಾಜಾ ಉತ್ತರದಲ್ಲಿರುವ ಅಲ್ ಕರಾಮಾ, ಅಲ್ ರಿಮಲ್ ಮತ್ತು ಗಾಜಾ ನಗರದ ಅಲ್ ನಾಸರ್ ಸೇರಿದಂತೆ ಹಲವು ಪ್ರದೇಶಗಳು ವಸತಿ ಪ್ರದೇಶಗಳಲ್ಲಿ ದಾಳಿಗೆ ಗುರಿಯಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು