News Karnataka Kannada
Friday, May 10 2024
ವಿದೇಶ

ಹಮಾಸ್​​ ಅಟ್ಟಹಾಸಕ್ಕೆ 300 ಸಾವು, 200 ಮಂದಿಗೆ ಗಾಯ

Hamas threatens to release hostages if Israel stops bombing
Photo Credit : IANS

ಇಸ್ರೇಲ್:  ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ ಈ ವರೆಗೂ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇಸ್ರೇಲಿ ಮಹಿಳೆಯರನ್ನು ಹತ್ಯೆ ಮಾಡಿ ಅವರ ನಗ್ನ ದೇಹಗಳನ್ನು ಹಮಾಸ್ ಮೆರವಣಿಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗತೊಡಗಿದ್ದು, ಹಮಾಸ್ ದಾಳಿಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿದೆ. 5-10 ನಿಮಿಷಗಳಲ್ಲೆ ಗಾಜಾದಿಂದ ಬರೊಬ್ಬರಿ 5 ಸಾವಿರ ರಾಕೆಟ್​​ಗಳು ಹಾರಿದ್ದು,. ಹೀಗೆ ಆಗಸದಲ್ಲಿ ತೂರಿಬಂದ ಈ ರಾಕೆಟ್​​ಗಳು ಇಸ್ರೇಲ್​-ಪ್ಯಾಲೆಸ್ತೈನ್ ಮಧ್ಯೆ ರಣ ಭೀಕರ ಕಾಳಗಕ್ಕೆ ಮುನ್ನುಡಿ ಬರೆದಿದೆ.

ಇನ್ನು ಇಸ್ರೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ಮಂದಿ ನೇಪಾಳ ವಿದ್ಯಾರ್ಥಿಗಳು ಹಮಾಸ್ ಸೆರೆಗೆ ಸಿಲುಕಿದ್ದಾರೆ. ಅಲ್ಲದೆ 6000 ಕ್ಕೂ ಹೆಚ್ಚು ಕೇರಳಿಗರು ಇಸ್ರೇಲ್ ನಲ್ಲಿ ವಾಸವಾಗಿದ್ದು, ಸದ್ಯ ಬಂಕರ್ ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇಸ್ರೇಲ್ ನಲ್ಲಿ ಮೇಘಾಲಯದ 27 ಜನ ಸಿಲುಕಿದ್ದು, ಅವರನ್ನು ರಕ್ಷಿಸಲು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯ ಕೋರಿದ್ದಾರೆ. ಮೇಘಾಲಯದ ಜನರನ್ನು ಮರಳಿ ರಾಜ್ಯಕ್ಕೆ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸಂಗ್ಮಾ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು