Bengaluru 24°C
Ad

ಅಮೇರಿಕಾದಲ್ಲಿ ಮತ್ತೆ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು

ಅಮೇರಿಕಾದಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಇನ್ನು ಮುಂದುವರೆದಿದೆ. ಇದು ಎಂದಿಗೆ ಕೊನಗೊಳ್ಳುವುದೋ ತಿಳಿದಿಲ್ಲ ಕೆಲವರು ಕೊಲೆಯಾದರೆ ಇನ್ನು ಕೆಲವರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ.ಇದೀಗ ಮತ್ತೆ ಭಾರತೀಯ ಮೂಲದ ಮೂರು ವಿದ್ಯಾರ್ಥಿಗಳು ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಎಲ್ಲರೂ 18 ವರ್ಷದವರು ಎಂದು ಗುರುತಿಸಲಾಗಿದೆ.

ಅಮೇರಿಕಾ : ಅಮೇರಿಕಾದಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಇನ್ನು ಮುಂದುವರೆದಿದೆ. ಇದು ಎಂದಿಗೆ ಕೊನಗೊಳ್ಳುವುದೋ ತಿಳಿದಿಲ್ಲ ಕೆಲವರು ಕೊಲೆಯಾದರೆ ಇನ್ನು ಕೆಲವರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ.ಇದೀಗ ಮತ್ತೆ ಭಾರತೀಯ ಮೂಲದ ಮೂರು ವಿದ್ಯಾರ್ಥಿಗಳು ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಎಲ್ಲರೂ 18 ವರ್ಷದವರು ಎಂದು ಗುರುತಿಸಲಾಗಿದೆ.

ಆರ್ಯನ್‌ ಜೋಷಿ, ಶ್ರಿಯಾ ಅವಸರಲ ಮತ್ತು ಅನ್ವಿ ಶರ್ಮಾ ಮೃತ ವಿದ್ಯಾರ್ಥಿಗಳು. ಗಾಯಯೊಂಡವರನ್ನು ಋತ್ವಿಕ್‌ ಸೋಮೆಪಳ್ಳಿ ಹಾಗೂ ಮೊಹಮ್ಮದ್‌ ಲಿಯಾಕತ್‌ ಎಂದು ಗುರುತಿಸಲಾಗಿದ್ದು, ಅವರಿಗೆ ಆಲ್ಫಾರೆಟ್ಟಾದಲ್ಲಿನ ನಾರ್ತ್ ಫುಲ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಐವರು ಆಲ್ಫಾರೆಟ್ಟಾ ಹೈಸ್ಕೂಲ್‌ ಮತ್ತು ಜಾರ್ಜಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ಇವರಿದ್ದ ಕಾರು ಅತಿ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ನಿಯಂತ್ರಣಕ್ಕೆ ಸಿಗದೆ ಮೇ 14ರಂದು ಕಾರು ಆಲ್ಫಾರೆಟ್ಟಾ ಬಳಿ ಅಪಘಾತಕ್ಕೀಡಾಗಿತ್ತು ಎಂದು ಮೂಲ ತಿಳಿಸಿದೆ.

 

Ad
Ad
Nk Channel Final 21 09 2023
Ad