Ad

‘ವಿಚಾರ ಲಹರಿ ಪುಸ್ತಕ’ ಬಿಡುಗಡೆ ಜೊತೆಗೆ ನಿವೃತ್ತ ಶಿಕ್ಷಕರ ಸಮಾಗಮ ಕಾರ್ಯಕ್ರಮ

ಜಿಲ್ಲೆಯ ಗಡಿನಾಡು ಹಳ್ಳಿಗಳು ರಾಜ್ಯದಲ್ಲಿಯೇ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹಳೆಯ ವಿದ್ಯಾರ್ಥಿಗಳ ಬಳಗದಿಂದ ನಿವೃತ್ತ ಶಿಕ್ಷಕರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ ಗಡಿನಾಡು ಗ್ರಾಮ ಬಳೂರ್ಗಿಯಲ್ಲಿ ನಡೆಯುತ್ತಿದೆ.

ಕಲಬುರಗಿ: ಜಿಲ್ಲೆಯ ಗಡಿನಾಡು ಹಳ್ಳಿಗಳು ರಾಜ್ಯದಲ್ಲಿಯೇ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹಳೆಯ ವಿದ್ಯಾರ್ಥಿಗಳ ಬಳಗದಿಂದ ನಿವೃತ್ತ ಶಿಕ್ಷಕರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ ಗಡಿನಾಡು ಗ್ರಾಮ ಬಳೂರ್ಗಿಯಲ್ಲಿ ನಡೆಯುತ್ತಿದೆ.

Ad
300x250 2

ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿಕ್ಷಕ ಅಣ್ಣಾರಾವ ಪಾಟೀಲ ಗುರುವಿನ ಗುಲಾಮನಾಗುವ ತನಕ ಸಿಗದಣ್ಣ ಮುಕ್ತಿ ಎನ್ನುವ ಮಾತಿನಂತೆ ನಮಗೆ ವಿದ್ಯೆ ಕಲಿಸಿದ ಗುರಿಗಳಿಗೆ ನಾವು ಋಣಿಯಾಗದಿದ್ದರೆ ನಮ್ಮ ಜೀವನದ ಸಾರ್ಥಕಥೆ ವ್ಯರ್ಥವಾಗುತ್ತದೆ.ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಸುಮಾರ 90 ವರ್ಷದ ನಿವೃತ್ತ ಶಿಕ್ಷಕರು ವಿಚಾರ ಲಹರಿ ಎಂಬ ಪುಸ್ತಕ ಬರೆದಿದ್ದಾರೆ.ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದೆ ದಿನಾಂಕ 23 ರ ಭಾನುವಾರದಂದು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರ ಡಾ.ಯಲ್ಲಪ ಪೂಜಾರಿ ವಿದ್ಯಾರ್ಥಿಗಳ ಜೀವನದ ಸಂಜೀವಿನಿ ಶಾಲಾ ಶಿಕ್ಷಕರಾಗಿರುತ್ತಾರೆ.ಇಂದಿನ ಅಂತರ್ಜಾಲ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಇರುವ ಗೌರವ ಕ್ರಮೇಣವಾಗಿ ಕಡಿಮೆ ಆಗುತ್ತ ಬರುತ್ತಿದೆ.ಈ ಬೆಳವಣಿಗೆ ಮುಂದೆ ಸಾಗಿದರೆ ವಿದ್ಯಾರ್ಥಿ-ಶಿಕ್ಷಕರ ಸಂಭಂಧಕ್ಕೆ ಕುತ್ತು ತರುವ ದಿನಗಳು ಹತ್ತಿರದಲ್ಲಿವೆ ಎನಿಸುತ್ತಿವೆ.ಅದಕ್ಕಾಗಿ ಗಡಿ ಗ್ರಾಮದಲ್ಲಿ ಫಕ್ರುಧಿನ್ ಗೌರಕರ ಅವರ ವಿಚಾರ ಲಹರಿ ಪುಸ್ತಕ ಬಿಡುಗಡೆ ಜೊತೆಗೆ ಹಳೆ ವಿದ್ಯಾರ್ಥಿ ಬಳಗದಿಂದ ನಿವೃತ್ತ ಶಿಕ್ಷಕರ ಸಮಾಗಮ ಕಾರ್ಯಕ್ರಮ ನಡೆಯಲಿದೆ ಸುತ್ತಮುತ್ತಲಿನ ಗ್ರಾಮದ ವಿಚಾರವಂತರು ಬುದ್ದಿಜೀವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ಮನವಿ ಮಾಡಿದರು.

ತದನಂತರ ಮಾತನಾಡಿದ ಪ್ರಾಧ್ಯಾಪಕ ಡಾ. ಗೌತಮ ಸಕ್ಕರಿಗಿ ಒಬ್ಬ ನಿವೃತ್ತ ಶಿಕ್ಷಕರನ್ನು ಸುಮಾರು 40 ವರ್ಷಗಳ ನಂತರವೂ ನೆನಪಿನಲ್ಲಿಟ್ಟುಕೊಂಡು ಅವರನ್ನ ಸ್ಮರಿಸುವುದು ಈಗನ ಕಾಲದಲ್ಲಿ ಅದ್ಬುತವೇ ಸರಿ.ಸಮುದಾಯದ ಆದರಲ್ಲಿ ಸಮಾಜ ಹೋಗುತ್ತಿದ್ದರೆ ಒಬ್ಬ ಇಸ್ಲಾಂ ಧರ್ಮದ ನಿವೃತ್ತ ಶಿಕ್ಷಕರು ಬರೆದಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಒಗ್ಗೂಡಿ ಮಾಡುತ್ತಿರುವುದು ಸಾಮರಸ್ಯಕ್ಕೆ ಅಪರೂಪದ ಉದಾಹರಣೆಯಾಗಿದೆ.ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಗೌರವ ಹೆಚ್ಚಾಗಬೇಕು.ಇಬ್ಬರ ನಡುವಿನ ಗೌರಾವಾಪೂರ್ಣ ವ್ಯಕ್ತಿತ್ವ ವೃದ್ದಿಯಾಗಬೇಕು ಎಂಬುದು ಕಾರ್ಯಕ್ರಮದ ಸಂದೇಶವಾಗಿದೆ ಎಂದರು.
ನಂತರ ಮಾತನಾಡಿದ ಶಿಕ್ಷಕರಾದ ರಮೇಶ ಚಲಗೇರಿ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರು ಸಾಹಿತಿಗಳು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ಬಳಗಕ್ಕೆ ಮಾದರಿಯಾಗುವ ಕಾರ್ಯಕ್ರಮ ಇದಾಗಲಿದೆ.ಒಬ್ಬ ನಿವೃತ್ತ ಶಿಕ್ಷಕ ತನ್ನ ಅನುಭವಗಳನ್ನು ತಾನು ಬರೆದಿರುವ ಕೃತಿಗಳ ಮುಖಾಂತರ ಜನರ ವಿಚಾರಶಕ್ತಿಗೆ ಹರಡಿಸುತ್ತಿದ್ದಾನೆ ಎಂದರೆ ಅವರ ಶಿಕ್ಷಕ ವೃತ್ತಿ ಜೀವನ ಅವರ ರಕ್ತದಲ್ಲಿದೆ ಎಂಬುದನ್ನು ತಿಳಿಸಿತ್ತದೆ.ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುವುದು ನಮ್ಮ ಸೌಭಾಗ್ಯ ಎನಿಸುತ್ತಿದೆ.ನಮ್ಮ ಜೀವನಕ್ಕೆ ದಾರಿದೀಪವಾದ ಶಿಕ್ಷಕರನ್ನು ನೆನೆಸಿಕೊಳ್ಳುವ ವಿಚಾರ ಶಕ್ತಿಗೆ ಕಾರಣರಾದ ಶಿಕ್ಷಕರನ್ನು ಒಂದೆಡೆಗೆ ಸೇರಿಸಿ ಕಾರ್ಯಕ್ರಮ ಮಾಡುವುದು ಸಂತಸ ಸಡಗರದ ಕ್ಷಣವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಫರದಿನ್ ಫಿರಜಾದೆ,ಶಿಕ್ಷಕ ಶಿವಪ್ಪ ಪೂಜಾರಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

Ad
Ad
Nk Channel Final 21 09 2023
Ad