Bengaluru 22°C
Ad

ಮಂಗಳೂರು: ಪೊಲೀಸ್ ಆಯುಕ್ತರಾದ ಮಾಜಿ ಶಾಸಕ ಮೊಯ್ದಿನ್ ಬಾವಾ !

Polic

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಸದ್ಯ ಪೊಲೀಸ್ ಆಯುಕ್ತಾರಾಗಿದ್ದಾರೆ. ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

Ad
300x250 2

ಹೌದು. . . ಆದರೆ ಇದು ನಿಜವಲ್ಲ ಬದಲಾಗಿ ಸಿನೆಮಾವೊಂದರ ದೃಶ್ಯ. ಮಾಜಿ ಶಾಸಕರು ಪೊಲೀಸ್ ಆಯುಕ್ತರಾಗಿ ಬಣ್ಣ ಹಚ್ಚಿರುವುದು ಡಿ ಯೋಗರಾಜ್ ನಿರ್ದೇಶನದ ‘ಲುಡೋ’ ಚಿತ್ರಕ್ಕಾಗಿ. ಈ ಸಿನಿಮಾ ಚಿತ್ರೀಕರಣದ ಕೆಲ ವಿಡಿಯೋ ಕ್ಲಿಪ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲುಡೋ’ ಚಿತ್ರದಲ್ಲಿ ಬಾವಾ ಅವರು ಪೊಲೀಸ್ ಆಯುಕ್ತರಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ.

 

Ad
Ad
Nk Channel Final 21 09 2023
Ad