Ad

ಪ್ರಥಮ್‌ಗೆ ಕಿಡಿಗೇಡಿಗಳಿಂದ ಬೆದರಿಕೆಯ ಕರೆ: ದೂರು ದಾಖಲು

ಬಿಗ್ ಬಾಸ್ ಕನ್ನಡ 4ರ ವಿನ್ನರ್ ಪ್ರಥಮ್‌ಗೆ ಕೆಲ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.

ಬಿಗ್ ಬಾಸ್ ಕನ್ನಡ 4ರ ವಿನ್ನರ್ ಪ್ರಥಮ್‌ಗೆ ಕೆಲ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.

Ad
300x250 2

ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಪ್ರಥಮ್ ದೂರು ನೀಡಿದ್ದಾರೆ. ಬಳಿಕ ದೂರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ.

ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ ಕರ್ನಾಟಕ ಅಳಿಯ ತಂಡದ ಆಫೀಸ್ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮತ್ತು ಮೆಸೇಜ್ ಸೋಷಿಯಲ್ ಮೀಡಿಯಾ ವಾರ್ನಿಂಗ್ಸ್ ಎಲ್ಲವೂ ಪೊಲೀಸರೇ ನೋಡಿಕೊಳ್ತಾರೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

 

Ad
Ad
Nk Channel Final 21 09 2023
Ad