News Karnataka Kannada
Sunday, April 28 2024
ಮಹಾರಾಷ್ಟ್ರ

ಆರ್ ಎಸ್ಎಸ್ ಹರಡಿದ ಕೋಮು ವಿಷ ಈಗ ಹೊರಬರುತ್ತಿದೆ: ಇಂಡಿಯಾ ಸಭೆಯಲ್ಲಿ ಖರ್ಗೆ

ಶನಿವಾರ ನಡೆದ ಇಂಡಿಯಾ ಮೈತ್ರಿಕೂಟದ ವರ್ಚುವಲ್ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆಮಾಡಲಾಗಿದೆ.
Photo Credit : Facebook

ಮುಂಬೈ: ಬಿಜೆಪಿಯನ್ನು ಮುಂಬರುವ 2024ರ ಲೋಕಸಭೆ ಚುನಾವಣೆಗಳಲ್ಲಿ ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ವಿಪಕ್ಷ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆದಿದೆ. ಈ ಸಭೆಯಲ್ಲಿ ಇಂಡಿಯಾ ಒಕ್ಕೂಟ 13 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಿದೆ.

ಆದರೆ ಬಹುಚರ್ಚೆಯಲ್ಲಿದ್ದ ಮೈತ್ರಿಕೂಟದ ಲೋಗೋ ಬಿಡುಗಡೆಯಾಗಿಲ್ಲ. ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಒಕ್ಕೂಟದ ಪಾಟ್ನಾ ಮತ್ತು ಬೆಂಗಳೂರಿನ ಸಭೆ ಯಶಸ್ವಿಯಾಗಿದೆ. ಇದರಿಂದಾಗಿ ಬೆದರಿರುವ ಪ್ರಧಾನಿ ಮೋದಿ ಅವರು ನಮ್ಕ ಒಕ್ಕೂಟವನ್ನು ಇಂಡಿಯಾ ಹೆಸರನ್ನು ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸಿ ಗುಲಾಮಗಿರಿಯ ಸಂಕೇತ ಎಂದು ಹೇಳಿದ್ದಾರೆ. ಅಲ್ಲದೆ ಸೇಡಿನ ರಾಜಕಾರಣ ಹೆಚ್ಚು ಮಾಡುತ್ತಿದ್ದಾರೆ ಎಂದರು.

ಸಭೆಗೆ ಮುನ್ನ ಎಕ್ಸ್‌ ಮಾಡಿದ್ದ ಖರ್ಗೆ ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ದಾಳಿಗಳು, ಹೆಚ್ಚಿನ ಬಂಧನಗಳಿಗೆ ನಾವು ಸಿದ್ಧರಾಗಿರಬೇಕು. ಬಿಜೆಪಿ ಸರ್ಕಾರವು ನಮ್ಮ ಒಗ್ಟಟ್ಟನ್ನು ಮುರಿಯಲು ನಾಯಕರ ವಿರುದ್ಧ ವಿವಿಧ ಸರ್ಕಾರಿ ಏಜೆನ್ಸಿಗಳನ್ನು ದುರುಪಯೋಗಪಡಿಸಿ ದಾಳಿ ಮಾಡುತ್ತದೆ.
ಮಹಾರಾಷ್ಟ್ರ, ರಾಜಸ್ಥಾನ, ಬಂಗಾಳ, ಜಾರ್ಖಂಡ್ ಮತ್ತು ಛತ್ತೀಸ್ಗಢದಲ್ಲಿ ಇದು ನಡೆದಿದೆ. ಇಂದು  ನಮ್ಮ ಸಮಾಜದ ಪ್ರತಿಯೊಂದು ವಿಭಾಗ ಅಂದರೆ ರೈತರು, ಯುವಕರು, ಮಹಿಳೆಯರು, ಮಧ್ಯಮ ವರ್ಗದವರು, ಸಾರ್ವಜನಿಕ ಬುದ್ಧಿಜೀವಿಗಳು, ಎನ್‌ಜಿಒಗಳು ಮತ್ತು ಪತ್ರಕರ್ತರು ಎಲ್ಲರೂ ಬಿಜೆಪಿಯ ಸರ್ವಾಧಿಕಾರಿ ದುರಾಡಳಿತದ ಅಂತ್ಯಕ್ಕೆ ಹಾತೊರೆಯುತ್ತಿದ್ದಾರೆ.

140 ಕೋಟಿ ಭಾರತೀಯರು ತಮ್ಮ ಸಂಕಷ್ಟಗಳಿಂದ ಮುಕ್ತಿ ಪಡೆಯುವ ಭರವಸೆಯೊಂದಿಗೆ ನಮ್ಮತ್ತ ನೋಡುತ್ತಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಕಳೆದ 9 ವರ್ಷಗಳಿಂದ ಹರಡಿದ ಕೋಮು ವಿಷವು ಈಗ ಅಮಾಯಕ ರೈಲು ಪ್ರಯಾಣಿಕರ ಮೇಲೆ ಮತ್ತು ಅಮಾಯಕ ಶಾಲಾ ಮಕ್ಕಳ ಮೇಲೆ ದ್ವೇಷದ ಅಪರಾಧಗಳಲ್ಲಿ ಕಂಡುಬರುತ್ತದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಬಯಸಿದೆ. ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು ನಿರಾಕರಿಸಲಾಗುತ್ತಿದೆ. ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ನೀಡಬೇಕಾದ MGNREGA ಅನುದಾನ ನೀಡುತ್ತಿಲ್ಲ.

ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಿಶೇಷ ಅನುದಾನಗಳು ಮತ್ತು ರಾಜ್ಯ ನಿರ್ದಿಷ್ಟ ಅನುದಾನಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಎಕ್ಸ್‌ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು