ನವದೆಹಲಿ: ಲಡಾಕ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಲಡಾಖ್ನ ಕರ್ದುಂಗ್ ಲಾ ಪಾಸ್ಗೆ ಭೇಟಿ ನೀಡಿದರು.
ಲೇಹ್ನಿಂದ ಸುಮಾರು 40 ಕಿಲೋಮೀಟರ್ನಲ್ಲಿರುವ ಕರ್ದುಂಗ್ ಲಾ ಪಾಸ್ ಶ್ಯೋಕ್ ಮತ್ತು ನುಬ್ರಾ ಕಣಿವೆ ಹೆಬ್ಬಾಗಿಲಾಗಿರುವ ಕರ್ದುಂಗ್ ಲಾ ಪಾಸ್ ಅತಿ ಎತ್ತರದ ಪರ್ವತ ಪ್ರದೇಶವಾಗಿದೆ. ಅಲ್ಲಿನ ಸ್ಥಳೀಯರನ್ನು ರಾಹುಲ್ ಭೇಟಿಯಾಗಿ ಸುಖ ಕಷ್ಟ ವಿಚಾರಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಕಾಂಗ್ರೆಸ್ ನಾಯಕ ಇತರ ಬೈಕರ್ಗಳೊಂದಿಗೆ ಖರ್ದುಂಗ್ ಲಾ ತಲುಪಿ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಇನ್ನು ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಫೋಟೋಗಳಲ್ಲಿ ರಾಹುಲ್ ಸ್ಥಳೀಯರಿಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲದೆ ಲಡಾಖ್ನ ಪರ್ವತ ಭೂಪ್ರದೇಶದಲ್ಲಿ ಕೆಟಿಎಂ 390 ಅಡ್ವೆಂಚರ್ ಬೈಕ್ ರೈಡ್ ಮಾಡುತ್ತಿದ್ದು ಕೆಲವು ಗಿಟಾರ್ ವಾದಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ರಾಹುಲ್ ಆಗಸ್ಟ್ 25ರ ವರೆಗೆ ಲಡಾಕ್ ನಲ್ಲಿಯೇ ಇರುತ್ತಾರೆ ಎನ್ನಲಾಗಿದೆ.
https://www.instagram.com/reel/CwKp27UyaSn/?utm_source=ig_web_button_native_share