News Karnataka Kannada
Monday, April 29 2024
ವಿದೇಶ

ಸರಣಿ ಶಿಶು ಹಂತಕಿ ಲೂಸಿ ಲೆಟ್ಟಿಗೆ ಜೀವಾವಧಿ ಶಿಕ್ಷೆ

Serial infant killer Lucy Letty sentenced to life in prison
Photo Credit : News Kannada

ಲಂಡನ್: ಆರು ನವಜಾತ ಶಿಶುಗಳನ್ನು ಕೊಂದು ಏಳನೇ ಮಗುವನ್ನು ಕೊಲ್ಲಲು ಯತ್ನಿಸಿದ ಬ್ರಿಟಿಷ್ ನರ್ಸ್ ಲೂಸಿ ಲೆಟ್ಬಿಗೆ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದ ಕುರಿತು ಕಳೆದ ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು.

ಜೂನ್ 2015 ಮತ್ತು ಜೂನ್ 2016 ರ ನಡುವೆ ವಾಯುವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಶಿಶುಗಳ ಘಟಕದಲ್ಲಿ ಮಗುವಿನ ಸಾವಿನ ಸರಣಿ ಸಾವಿನ ನಂತರ ಆಕೆಯನ್ನು ಬಂಧಿಸಲಾಗಿತ್ತು.

ಸರಣಿ ಸಾವಿನ ತನಿಖಾಧಿಕಾರಿಯಾದ ವೈದ್ಯ: ಸಕಾರಣವಿಲ್ಲದೆ ಶಿಶುಗಳ ಸರಣಿ ಸಾವಿನ ಬಗ್ಗೆ ಆತಂಕಗೊಂಡಿದ್ದ ಭಾರತ ಮೂಲದ, ಬ್ರಿಟನ್‌ನಲ್ಲಿ ಜನಿಸಿದ ಶಿಶು ವೈದ್ಯ ಡಾ. ರವಿ ಜಯರಾಮ್ ಈ ಪ್ರಕರಣ ಬೆಳಕಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2015ರಲ್ಲಿ ಮೂರು ಮಕ್ಕಳು ಮೃತಪಟ್ಟ ಬಳಿಕ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ರವಿ 2017ರ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಹಾಗೂ ಪೊಲೀಸ್ ಅಧಿಕಾರಿಯನ್ನು ವೈದ್ಯರು ಭೇಟಿ ಮಾಡಿ ಮಾಡಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದರು.

ವಿಕೃತ ಮನಸ್ಸಿನ ಶ್ರೂಶಷಕಿ: 33 ವರ್ಷದ ನರ್ಸ್ ಲೂಸಿ, ಶಿಶುಗಳ ರಕ್ತ ನಾಳಗಳಲ್ಲಿ ಗಾಳಿ ಹಾಗೂ ಇನ್ಸುಲಿನ್‌ಗಳನ್ನು ಚುಚ್ಚುತ್ತಿದ್ದಳು. ಜಠರ ಕರುಳಿನ ಭಾಗಕ್ಕೆ ಗಾಳಿ ಸೇರಿಸುತ್ತಿದ್ದಳು; ಹಾಲು ಅಥವಾ ದ್ರವವನ್ನು ಅಳತೆಗೂ ಮೀರಿ ಮಗುವಿಗೆ ಕುಡಿಸಿ ಸಾಯಿಸುತ್ತಿದ್ದಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು