News Karnataka Kannada
Tuesday, May 07 2024
ದೇಶ

‘ಉಜ್ವಲಾ 2.0’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Modi Main Newsk 9189649604
Photo Credit :

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಎರಡನೇ ಹಂತ ‘ಉಜ್ವಲಾ 2.0’ಗೆ ಮಂಗಳವಾರ ಚಾಲನೆ ನೀಡಿದರು.

‌ಉತ್ತರ ಪ್ರದೇಶದ ಮಹೋಬಾ ಪಟ್ಟಣದ 10 ಜನ ಮಹಿಳೆಯರಿಗೆ ಪ್ರಧಾನಿ ಅವರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವರ್ಚುವಲ್‌ ವಿಧಾನದ ಮೂಲಕ ವಿತರಿಸಿದರು.

ದೇಶದ ಸಂಪನ್ಮೂಲಗಳು ಎಲ್ಲರಿಗೂ ತಲುಪಬೇಕು ಎಂಬುದೇ ಸರ್ಕಾರದ ಉದ್ದೇಶ. ಈ ವರ್ಷ ಸ್ವಾತಂತ್ರ್ಯೋತ್ಸವದ 75ನೇ ವರ್ಷವನ್ನು ಆಚರಿಸಲಿದ್ದೇವೆ. ಕಳೆದ ಏಳೂವರೆ ದಶಕಗಳಲ್ಲಾದ ಪ್ರಗತಿಯನ್ನು ಅವಲೋಕಿಸಿದಾಗ, ಕೆಲವು ಪರಿಸ್ಥಿತಿಗಳಲ್ಲಿ ಕೆಲ ದಶಕಗಳ ಹಿಂದೆಯೇ ಬದಲಾವಣೆ ಆಗಬೇಕಿತ್ತು ಎಂಬ ಭಾವನೆ ಮೂಡುತ್ತದೆ’ ಎಂದು ಪ್ರಧಾನಿ ಹೇಳಿದರು.

ಕುಡಿಯುವ ನೀರು, ರಸ್ತೆ, ವಿದ್ಯುತ್‌, ಆಸ್ಪತ್ರೆ, ಶಾಲೆ, ಅಡುಗೆ ಅನಿಲ, ಮನೆಗಳಂತಹ ಅಗತ್ಯ ಸೌಲಭ್ಯಗಳಿಗಾಗಿ ಜನರು ದಶಕಗಟ್ಟಲೇ ಕಾಯಬೇಕಾಯಿತು. ಅದರಲ್ಲೂ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು. ಇದು ದುರದೃಷ್ಟಕರ’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು