News Karnataka Kannada
Wednesday, May 08 2024
ದೇಶ

ರಾಜನಾಥ್ ಸಿಂಗ್‌ ಜನ್ಮದಿನ: ಪ್ರಧಾನಿ ಸೇರಿದಂತೆ ಗಣ್ಯರ ಶುಭಾಶಯ

Rajnath Sing World 10072021
Photo Credit :

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ ಅವರು ಇಂದು 70 ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

1951 ಜುಲೈ 10 ರಂದು ರಾಜನಾಥ್ ಸಿಂಗ್ ಜನಿಸಿದ್ದು, ಇಂದು ಅವರಿಗೆ 70 ವರ್ಷ ತುಂಬಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರು 2019ರಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಭಕೋರಿ, ‘ನೀವು ದೃಢವಾಗಿ, ಆರೋಗ್ಯಕರವಾಗಿ ಹಾಗೂ ದೀರ್ಘಕಾಲ ಬದುಕಬೇಕೆಂದು ಪಾರ್ಥಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರಧ್ಯಕ್ಷ ಜೆ. ಪಿ ನಡ್ಡಾ ಶುಭಾಶಯವನ್ನು ತಿಳಿಸಿ, ಗೌರವಾನ್ವಿತ ಸ್ವಭಾವ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಬಲವಾದ ಸಂಪರ್ಕಕ್ಕೆ ಹೆಸರುವಾಸಿಯಾದ ರಾಜನಾಥ್ ಸಿಂಗ್‍ ಅವರಿಗೆ ಹುಟ್ಟು ಹಬ್ಬದ ಶುಭಾಶಯ. ಪಕ್ಷಕ್ಕೆ ನಿಮ್ಮ ಅಪಾರದ ಕೊಡುಗೆ ಸ್ಪೂರ್ತಿದಾಯಕವಾಗಿದೆ ಎಂದು ಬರೆದುಕೊಂಡಿದ್ದಾರೆ.

ಅದಲ್ಲದೆ ನೂತನವಾಗಿ ನೇಮಕಗೊಂಡ ನೂತನ ರೈಲ್ವೆ ಸಚಿವ ಅಶ್ವಿನಿ ವೈಷ್ನವ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ರಾಜ್ಯಸಭಾ ಸದಸ್ಯ ಜೋತಿರಾದಿತ್ಯ ಸಿಂದಿಯಾ ಕೂಡಾ ಶುಭಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು