Bengaluru 22°C
Ad

ಟ್ರಾಲಿಗೆ ಕಾರು ಡಿಕ್ಕಿ : ತಾಯಿ-ಮಗಳು ಬದುಕಿದ್ದೇ ಪವಾಡ

ಭಯಾನಕ ರಸ್ತೆ ಅಪಘಾತದಲ್ಲಿ ತಾಯಿ ಮಗಳು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿದ ಘಟನೆ ಗ್ರೇಟರ್ ನೋಯ್ಡಾದ ದಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೋಯ್ಡಾ: ಭಯಾನಕ ರಸ್ತೆ ಅಪಘಾತದಲ್ಲಿ ತಾಯಿ ಮಗಳು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿದ ಘಟನೆ ಗ್ರೇಟರ್ ನೋಯ್ಡಾದ ದಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಮೇ 23 ಬೆಳಗ್ಗೆ 7 ಗಂಟೆಗೆ ನಡೆದಿದೆ. ದೆಹಲಿಯಿಂದ ತಾಯಿ ಮತ್ತು ಮಗಳು ತಮ್ಮ ಕ್ರೆಟಾ ಕಾರಿನ ಮೂಲಕ ನೋಯ್ಡಾಗೆ ಬರುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ವೇಳೆ ವೇಗವಾಗಿ ಬಂದ ಕಾರು, ಇಟ್ಟಿಗೆಗಳಿಂದ ಲೋಡ್ ಆಗಿದ್ದ ಟ್ರಾಲಿಗೆ ಗುದ್ದಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಟ್ರಾಲಿಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದ ಏರ್​ಬ್ಯಾಕ್​ ಓಪನ್ ಆಗಿದೆ. ಪರಿಣಾಮ ತಾಯಿ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದ ತೀವ್ರತೆಯಿಂದ ನುಜ್ಜುಗುಜ್ಜಾದ ಕಾರಿನೊಳಗೆ ಲಾಕ್ ಆಗಿ ಬಿಟ್ಟಿದ್ದರು. ಜೋರಾಗಿ ಕಿರುಚಾಡುತ್ತಿದ್ದರು.

ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಲಾಕ್ ಆಗಿದ್ದ ಇವರನ್ನು ಹೊರ ತೆಗೆಯಲು ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಬೇಕಾಗಿದೆ ಎಂಬ ಮಾಹಿತಿ ಇದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ad
Ad
Nk Channel Final 21 09 2023
Ad