ಮೆಕ್ಸಿಕೋ ;ಜೀವ ಭಯದಿಂದ ದೇಶ ತೊರೆದಿರುವ ಐವರು ಆಫ್ಘಾನ್ ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಮೆಕ್ಸಿಕೋ ಮನವೀಯತೆ ಮರೆದು ಸ್ವಾಗತಿಸಿದೆ. ನಮ್ಮ ಮನೆಗೆ ನಿಮ್ಮನ್ನು ಆಹ್ವಾನಿಸುತ್ತೇವೆ ಎಂದು ಮೆಕ್ಸಿಕೋದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮಸಿಲೋ ಇಬ್ರಾಡ್ ತಿಳಿಸಿದ್ದಾರೆ.
ಆಫ್ಘಾನ್ನಲ್ಲಿ ಜೀವದ ಜತೆಗೆ ಮಹಿಳೆಯರು, ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ಮಾನವ ಮಾರಾಟದ ಬಗ್ಗೆ ಆತಂಕ ವ್ಯಕ್ತವಾಗಿದೆ. ಯುವತಿಯೊಬ್ಬಳು ತನಗಾದ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದು, ಆಕೆ ನಮ್ಮ ದೇಶದಲ್ಲಿ ವಿದ್ಯೆ ಸೇರಿ ಉದ್ಯೋಗ ಕೂಡ ಮಾಡಬಹುದು ಎಂದಿದ್ದಾರೆ. ನಿರಾಶ್ರಿತರ ಜೀವ ರಕ್ಷಿಸುವ ಕುರಿತು ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.