ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ದಿನೇ ದಿನೇ ಹೆಚ್ಚಾಗುತಿದ್ದು ಈ ದುಷ್ಕರ್ಮಿಗಳು ಬಿಗಿಯಾದ ಬಟ್ಟೆಗಳನ್ನು ಧರಿಸಿ ಒಂಟಿಯಾಗಿ ಹೋಗುತ್ತಿದ್ದ ಕಾರಣಕ್ಕೆ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ಸದ್ಯ ಅನೇಕ ನಗರಗಳನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾಲಿಗಳು ಸಮರ್ಕಂಡ್ ಗ್ರಾಮವನ್ನೂ ವಶಕ್ಕೆ ಪಡೆದಕೊಂಡಿದ್ದಾರೆ. ಈ ಗ್ರಾಮದಲ್ಲಿನ ಯುವತಿಯೊಬ್ಬಳು ಈಗ ಉಗ್ರರ ಗುಂಡಿಗೆ ಬಲಿಯಾಗಿದ್ದಾಳೆ. ಪೊಲೀಸರ ಪ್ರಕಾರ, 21 ವರ್ಷದ ಸಂತ್ರಸ್ತೆಯನ್ನು ನಜಾನಿನ್ ಎಂದು ಗುರುತಿಸಲಾಗಿದೆ.ಯುವತಿ ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸಿದ್ದರೂ ಅದು ಟೈಟ್ ಆಗಿತ್ತು ಎನ್ನುವ ಕಾರಣಕ್ಕೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಭಾಗದಲ್ಲಿನ ಮಹಿಳೆಯರು ಹೊರಗೆ ಹೋಗುವಂತಿಲ್ಲ. ಅದರಲ್ಲಿಯೂ ಉದ್ಯೋಗ ಮಾಡುವುದಂತೂ ನಿಷೇಧ. ಆದರೆ ಯುವತಿ ಹೊರಕ್ಕೆ ಹೋಗಿದ್ದೂ ಅಲ್ಲದೇ ಟೈಟ್ ಡ್ರೆಸ್ ಧರಿಸಿದ್ದಳು ಎನ್ನುವ ಕಾರಣಕ್ಕೆ ಈ ಕೃತ್ಯ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಬಿಗಿಯಾದ ಬುರ್ಖಾ ಧರಿಸಿದ್ದಕ್ಕೆ ಯುವತಿಯ ಹತ್ಯೆ ಮಾಡಿದ ತಾಲಿಬಾನಿಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.