News Karnataka Kannada
Friday, May 03 2024
ವಿದೇಶ

ಅಫ್ಘಾನಿಸ್ಥಾನದಿಂದ ಪಲಾಯನ ಮಾಡಿದ್ದ ಮಾಜಿ ಅದ್ಯಕ್ಷ ಅಶ್ರಫ್‌ ಘನಿ ಅವರಿಗೆ ದುಬೈ ಸರ್ಕಾರ ಆಶ್ರಯ

File Photo: Afghanistan's President Ashraf Ghani Speaks During His Inauguration As President, In Kabul
Photo Credit :

ದುಬೈ: ತಾಲಿಬಾನಿ ಪಡೆಗಳು ಅಫ್ಗಾನಿಸ್ತಾನವನ್ನು ಪೂರ್ಣ ಆಕ್ರಮಿಸಿಕೊಂಡ ಬೆನ್ನಲ್ಲೇ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದುಬೈನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ತಾಲಿಬಾನ್ ಆಕ್ರಮಣದ ಬಳಿಕ ಓಡಿ ಬಂದ ಅಶ್ರಫ್ ಘನಿ ಅವರಿಗೆ ಮಾನವೀಯತೆ ಆಧಾರದ ಮೇಲೆ ಆಶ್ರಯ ನೀಡಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ. ‘ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯವು, ಮಾನವೀಯತೆಯ ಆಧಾರದ ಮೇಲೆ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶಕ್ಕೆ ಸ್ವಾಗತಿಸಿರುವುದಾಗಿ ದೃಢೀಕರಿಸುತ್ತೇವೆ’ ಎಂದು ಯುಎಇ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಭಾನುವಾರ, ತಾಲಿಬಾನ್ ಉಗ್ರರು ಕಾಬೂಲ್ ನಗರವನ್ನು ಆಕ್ರಮಿಸಲು ಬರುತ್ತಿದ್ದಂತೆ ಅಶ್ರಫ್ ಘನಿ ಅವರು ಅಫ್ಗಾನಿಸ್ತಾನದಿಂದ ಕುಟುಂಬದ ಜೊತೆ ಪಲಾಯನ ಮಾಡಿದ್ದರು. ರಕ್ತಪಾತ’ವನ್ನು ತಪ್ಪಿಸಲು ದೇಶ ಬಿಟ್ಟು ಹೋಗುತ್ತಿರುವುದಾಗಿ ಅಶ್ರಫ್ ಘನಿ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು. ಅವರು ನಾಲ್ಕು ಕಾರುಗಳಲ್ಲಿ ಹಣ ತುಂಬಿಸಿಕೊಂಡು ರಷ್ಯಾಗೆ ಹೋದರೆಂದು ವರದಿ ಆಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು