News Karnataka Kannada
Monday, April 29 2024
ವಿದೇಶ

ಅಫ್ಘಾನಿಸ್ಥಾನದ ಅಪರೂಪದ ಖನಿಜ ದೋಚಲು ಮುಂದಾದ ಚೀನಾ ?

Taliban
Photo Credit :

ಕಾಬೂಲ್‌: ಆಫ್ಘನ್‌ನಲ್ಲಿ ಅಪರೂಪದ ಖನಿಜಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚೀನಾ, ಅವುಗಳನ್ನು ಬಹುಬೇಗ ತನ್ನ ದೇಶಕ್ಕೆ ವರ್ಗಾಯಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಆ ದೇಶದ ಗಡಿ ಪ್ರಾಂತ್ಯ ಬದಕ್ಷಾನ್‌ನ ಜನಕ್‌ ಪ್ರದೇಶದಲ್ಲಿ 50 ಕಿಲೋ ಮೀಟರ್ ರಸ್ತೆ ನಿರ್ಮಿಸುತ್ತಿದೆ.
ಈಗಾಗಲೇ ಶೇ.20 ರಷ್ಟು ಕಾಮಗಾರಿ ಮುಗಿದಿದೆ. ಉಳಿದ 80 ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಬದಕ್ಷಾನ್‌ ನಿಂದ ಚೀನಾದ ಷಿಂಜಿಯಾಂಗ್‌ ಪ್ರಾಂತ್ಯಕ್ಕೆ ಸಂಚಾರ ಸುಲಭವಾಗುತ್ತದೆ. ಅಫ್ಘಾನಿಸ್ತಾನದ ಮರುಭೂಮಿಯಲ್ಲಿ ಕಂಡು ಬರುವ ಅಪರೂಪದ ಖನಿಜಗಳನ್ನು ಹುಡುಕುತ್ತಿರುವ ಚೀನಾಕ್ಕೆ ಈ ರಸ್ತೆ ವರದಾನವಾಗಲಿದೆ. ಈ ಖನಿಜಗಳು ಕಂಪ್ಯೂಟರ್, ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳು, ಪವನ ಶಕ್ತಿ, ಟರ್ಬೈನ್‌ಗಳು ಹಾಗೂ ಹೈಬ್ರಿಡ್ ಕಾರುಗಳ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ. ಈ ನಿಟ್ಟಿನಲ್ಲಿ ಚೀನಾ ಈಗಾಗಲೇ ಅಫ್ಘಾನಿಸ್ತಾನದೊಂದಿಗೆ ಕೆಲವು ಒಪ್ಪಂದಗಳನ್ನೂ ಮಾಡಿಕೊಂಡಿದೆ. ತಾಲಿಬಾನ್ ಶೀಘ್ರದಲ್ಲಿ ಸ್ವಾಧೀನಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ರಸ್ತೆ ಪೂರ್ಣಗೊಂಡರೆ ಚೀನಾಕ್ಕೆ ವಾಣಿಜ್ಯಕವಾಗಿ ಮತ್ತಷ್ಟು ಲಾಭವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು