Showing 20 of 47 posts • Page 1 of 3
ಆರು ಜನರಿಗೆ ಗುಂಡಿಟ್ಟು, ಮಚ್ಚಿನಿಂದ ಕೊಚ್ಚಿ ಭೀಕರ ಹತ್ಯೆ ನಡೆಸಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾಡುತಿದ್ದ ಸಾಗಣೆ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 52ರ ಹಳಗುಣಕಿ ಕ್ರಾಸ್ನಲ್ಲಿ ಸಾರ್ವಜನಿಕರು ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ನಿನ್ನೆ ರಾತ್ರಿ ಸಂಭವಿಸಿದ ಭೀಕರ ಮಳೆ ಮತ್ತು ಗಾಳಿಗೆ ಮನೆಯೊಂದರ ಮೇಲ್ಪಾವಣಿ ಕುಸಿದು ಬಿದ್ದ ಪರಿಣಾಮ, ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಲಮೇಲ ತಾಲೂಕಿನ ಮೊರಗಟ್ಟಿ ಗ್ರಾಮದಲ್ಲಿ ನಡೆದಿದೆ.
ಇಂಡಿ ಮತ್ತು ಅಲಮೇಲ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿ ಮಹಿಳೆಯ ಚಿನ್ನದ ಸರ ಕಿತ್ಕೊಂಡು ಕಳ್ಳರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಟ್ರಕ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನಾನಾ ಬಗೆಯ ವಸ್ತುಗಳ ಬಾಕ್ಸ್ಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದು, ಸುಮಾರು 30 ಲಕ್ಷ ರೂ. ಮೌಲ್ಯದ 525 ಬಾಕ್ಸ್ಗಳ ನಾನಾ ಬಗೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಬ್ಬಿನ ಟ್ರ್ಯಾಕ್ಟರ್- ಬೈಕ್ ಮಧ್ಯೆ ಢಿಕ್ಕಿ ಉಂಟಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಂದಾಲ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಬ್ಲಾಸ್ಟ್ ಆಗಿ ಏಳು ಗೂಡಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ವಿಜಯಪುರದ ಚಾಲುಕ್ಯ ನಗರದ ಎಸ್ಬಿಐ ಬ್ಯಾಂಕ್ ಬಳಿ ನಡೆದಿದೆ.
ಸಾಲ ಪಡೆದ ಹಣ ವಾಪಸ್ ಕೊಡದ ಹಿನ್ನೆಲೆ ವ್ಯಕ್ತಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಗಳಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಸಂಪುಟ ಪುನರ್ ರಚನೆ, ಸಿಎಂ ನಿರಾಸಕ್ತಿ ವಿಚಾರವಾಗಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನ ಡಿಸಿಎಂ, ಸಿಎಂ ಗೆ ಕೇಳಬೇಕು. ಯಾರು ಆಸಕ್ತಿ ಹೊಂದಿದ್ದಾರೋ, ಯಾರು ಹೊಂದಿಲ್ಲವೊ ಅವರನ್ನೆ ಕೇಳಬೇಕು ಎಂದರು.
ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು, ಪೊಲೀಸರು ಇದ್ದಾರೆ. ಪ್ರಕರಣ ಬಯಲಿಗೆ ಎಳೆಯುತ್ತಾರೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಎಟಿಎಂ ದರೋಡೆ ಪ್ರಕರಣದಿಂದಾಗಿ ಎಲ್ಲರೂ ಬೆಚ್ಚಿಬೀಳಿಸಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು,
ವಕ್ಫ್ ಮಂಡಳಿ ದೇವಾಲಯಗಳಿಗೆ ನೋಟಿಸ್ ನೀಡಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
ವಿಜಯಪುರ ಜಿಲ್ಲೆ ಆಲಮೇಲ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿ ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ ಮಾಡಿಸಿ ಅರ್ಪಿಸಿದ್ದಾರೆ.
ಗುಮ್ಮಟ ನಗರ ವಿಜಯಪುರದ ಐತಿಹಾಸಿಕ ಗಣಪತಿ ಚೌಕ್ನಲ್ಲಿ ಕಲ್ಲೆಸೆದು ವಿಕೃತಿ ಮೆರೆದಿದ್ದ ಇಬ್ಬರು ಮುಸ್ಲಿಂ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದಕ್ಕೆ ಮೋದಿ ಅವರು ಮೊದಲು ರಾಜೀನಾಮೆ ನೀಡಲಿ ಎಂದು ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಇಬ್ಬರು ವ್ಯಕ್ತಿಗಳು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಕಾಲ್ ಮಾಡಿ ಬೇರೆ ರಾಜ್ಯದ ಪೊಲೀಸರು ಎಂದು ಬೆದರಿಕೆ ಹಾಕಿ ಓಟಿಪಿ ನಂಬರ್ ಪಡೆದು ಮೋಸ ಮಾಡುವ ಜಾಲ ಹುಟ್ಟಿಕೊಂಡಿದ್ದು, ಇಂತಹದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೆಲವು ಸಮುದಾಯದವರಿಗೆ ಗಣಪತಿ ಹಬ್ಬದ ಸಂಭ್ರಮಾಚರಣೆ ಸಹಿಸಲು ಆಗುವುದಿಲ್ಲ. ಅಂಥವರು ಗಾಂಧಿ- ನೆಹರೂ ಸೇರಿ ಮಾಡಿರುವ ಪಾಕಿಸ್ತಾನಕ್ಕೆ ಹೋಗಬಹುದು.