ವಿಜಯಪುರ : ಅರೆಬೆತ್ತಲೆಗೊಳಿಸಿ ಇಬ್ಬರು ಯುವಕರನ್ನ ಹಗ್ಗದಿಂದ ಕಟ್ಟಿ ಹಾಕಿ ಹಿಂಸೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುತ್ತರಗಿ ತಾಂಡದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಮಾನವೀಯ ಕೃತ್ಯದ ವಿಡಿಯೋ ವೈರಲ್ ಆಗಿದೆ.

ಶಂಕರಲಿಂಗ ನಾಯ್ಕ್‌ ಎಂಬಾತನಿಂದ ಈ ಅಮಾನವೀಯ ಕೃತ್ಯ ಆರೋಪ ಕೇಳಿಬಂದಿದೆ. ಇಬ್ಬರು ಅಮಾಯಕರ ಕೈ, ಕಾಲನ್ನು ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ. ಅರೆಬೆತ್ತಲೆಗೊಳಿಸಿ ಕೇವಲ ಒಳಪುಡುಪಿನಲ್ಲಿ ನಿಲ್ಲಿಸಿ ಕಿರುಕುಳ ನೀಡಲಾಗಿದೆ.

ಹಣ ನೀಡದ ಹಿನ್ನೆಲೆ ಈ ರೀತಿ ಅಮನಾವೀಯವಾಗಿ ಚಿತ್ರಹಿಂಸೆ ನೀಡಿರೋದಾಗಿ ಆರೋಪ ಕೇಳಿಬಂದಿದೆ. ಶಂಕರಲಿಂಗ ನಾಯ್ಕ್‌ ರಿಂದ ಪಿಎಸ್ ಐ ಸೇರಿದಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ರಾಜ್ಯದ ಅನೇಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ್ದು, ಕರೆ ಸ್ವೀಕರಿಸದ ಹಾಗೂ ಸ್ವಿಟ್ಚ್ ಆಫ್ ಆದವರಿಗೆ ಅವಾಚ್ಯ ಶಬ್ದದಿಂದ ಶಂಕರಲಿಂಗ ನಿಂದನೆ ಮಾಡಿದ್ದಾನೆ.

ಒಬ್ಬರನ್ನು ಪೊಲೀಸ್ ಅಧಿಕಾರಿಯನ್ನು ತೆಗೆದು ಹಾಕುತ್ತೇನೆ. ಪೊಲೀಸ್ ಅಧಿಕಾರಿಗಳನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಶಂಕರಲಿಂಗ ಹೇಳಿದ್ದಾನೆ. ಜೊತೆಗೆ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಫೋಸ್ ನೀಡಿರುವ ಶಂಕರಲಿಂಗನ ವಿಡಿಯೋ ಕೂಡ ವೈರಲ್ ಆಗಿದೆ.