Bengaluru 22°C
Ad

ಮೊಬೈಲ್ ಫೋನ್ ಕದ್ದು ಓಡುತ್ತಿದ್ದಾಗ ಕಾರಡಿಗೆ ಬಿದ್ದು ಸತ್ತ ಕಳ್ಳ: ವೀಡಿಯೋ ವೈರಲ್

Thft

ಮಹಿಳೆಯ ಮೊಬೈಲ್ ಕದ್ದು ಓಡುವ ವೇಳೆ ಕಳ್ಳನೋರ್ವ ಕಾರಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಭಯಾನಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @Desam_officialz ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ.

ಈ ವೀಡಿಯೋ ಪೋಸ್ಟ್ ಮಾಡಿದವರು ಹೇಳುವಂತೆ ಕಳ್ಳನೋರ್ವ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ವೇಗವಾಗಿ ಓಡುತ್ತಾ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ಅಷ್ಟೇ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿಯಾಗಿ ಆತನ ಮೇಲೆರಿದೆ. ಪರಿಣಾಮ ಮೊಬೈಲ್ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಘಟನೆ ಯಾವಾಗ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕಾರು ಡಿಕ್ಕಿಯಾದ ರಭಸಕ್ಕೆ ಆತ ಗಾಳಿಯಲ್ಲಿ ಎತ್ತರಕ್ಕೆ ಹಾರಿ ಡಾಮರು ರಸ್ತೆ ಮೇಲೆ ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

 

Ad
Ad
Nk Channel Final 21 09 2023
Ad