Ad

ಚಿತ್ರೀಕರಣ ವೇಳೆ ನಿಯಮ ಉಲ್ಲಂಘನೆ : ನಟ ಫಹಾದ್ ಫಾಸಿಲ್ ವಿರುದ್ಧ ದೂರು

ಮಲಯಾಳಂ ನಟ ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಪ್ರಸ್ತುತ ನಟರಲ್ಲಿ ಅತ್ಯುತ್ತಮ ನಟ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಫಹಾದ್ ಪ್ರತಿಭೆಯನ್ನು ದೇಶವೇ ಕೊಂಡಾಡುತ್ತಿದೆ. ಆದರೆ ಇದೀಗ ಕೇರಳದಲ್ಲಿ ಫಹಾದ್ ಮೇಲೆ ಪ್ರಕರಣವೊಂದು ದಾಖಲಾಗಿದೆ.

ಮಲಯಾಳಂ ನಟ ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಪ್ರಸ್ತುತ ನಟರಲ್ಲಿ ಅತ್ಯುತ್ತಮ ನಟ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಫಹಾದ್ ಪ್ರತಿಭೆಯನ್ನು ದೇಶವೇ ಕೊಂಡಾಡುತ್ತಿದೆ. ಆದರೆ ಇದೀಗ ಕೇರಳದಲ್ಲಿ ಫಹಾದ್ ಮೇಲೆ ಪ್ರಕರಣವೊಂದು ದಾಖಲಾಗಿದೆ.

Ad
300x250 2

ಫಹಾದ್ ಫಾಸಿಲ್ ಪ್ರಸ್ತುತ ‘ಪೇಯಿನ್ ಕಿಲ್ಲಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರೇ ಬಂಡವಾಳ ಸಹ ಹೂಡಿದ್ದಾರೆ.ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಕೇರಳದ ಎರ್ನಾಕುಲಂನ ಅಂಗಮಲೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಆದರೆ ಈ ವೇಳೆ ಕೆಲ ನಿಯಮಗಳ ಉಲ್ಲಂಘನೆ ಆಗಿದೆ ಎಂದು ವರದಿಗಳು ಪ್ರಕಟವಾಗಿದ್ದವು, ವರದಿಗಳನ್ನು ಆಧರಿಸಿ ಕೇರಳದ ಮಾನವ ಹಕ್ಕು ಆಯೋಗವು ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ

ಆದರೆ ಈ ವೇಲೆ ಚಿತ್ರತಂಡ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಚಿತ್ರೀಕರಿಸಿದ್ದೇವೆ ಎಂದು ಸಪಷ್ಟನೆ ನೀಡಿದೆ. ಇದನ್ನು ಪರಿಗಣಿಸಿದ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದ್ದು, ನಿರ್ಮಾಪಕ, ನಟ ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ಇತರೆ ಕೆಲವು ಪ್ರಮುಖ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ

Ad
Ad
Nk Channel Final 21 09 2023
Ad