Ad

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಿಎಂ : ಹಲವು ಯೋಜನೆಗಳ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ನವದೆಹಲಿಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಸಹಕಾರ ಸಚಿವಾಲಯದ ಮಂತ್ರಿ ಅಮಿತ್ ಶಾ, ಅವರನ್ನು ಭೇಟಿಯಾಗಿ ರಾಜ್ಯ ಗೃಹ ಇಲಾಖೆಯ ವ್ಯಾಪ್ತಿಗೆ ಒಳಪಡುವ ಯೋಜನೆಗಳ ಬಗ್ಗೆ ಚರ್ಚಿಸುವ ಮೂಲಕ ಪ್ರಸ್ತಾವನೆಯ ಪತ್ರಗಳನ್ನು ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ನವದೆಹಲಿಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಸಹಕಾರ ಸಚಿವಾಲಯದ ಮಂತ್ರಿ ಅಮಿತ್ ಶಾ, ಅವರನ್ನು ಭೇಟಿಯಾಗಿ ರಾಜ್ಯ ಗೃಹ ಇಲಾಖೆಯ ವ್ಯಾಪ್ತಿಗೆ ಒಳಪಡುವ ಯೋಜನೆಗಳ ಬಗ್ಗೆ ಚರ್ಚಿಸುವ ಮೂಲಕ ಪ್ರಸ್ತಾವನೆಯ ಪತ್ರಗಳನ್ನು ಸಲ್ಲಿಸಿದರು.

Ad
300x250 2

ಅಮಿತ್ ಶಾ, ಅವರ ಮುಂದೆ ಸಿದ್ದರಾಮಯ್ಯನವರು, ಇಟ್ಟ ಬೇಡಿಕೆಗಳು :

* ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ, ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಕೇಂದ್ರ ಕಾರವಾರದಲ್ಲಿ “ಇಂಡಿಯಾ ರಿಸರ್ವ್ ಬೆಟಾಲಿಯನ್” ಗಳ ಸ್ಥಾಪನೆಗೆ ಅನುಮೋದನೆ ನೀಡುವಂತೆ ಮನವಿ.. ತಲಾ ಬೆಟಾಲಿಯನ್ ಸ್ಥಾಪನೆಗೆ 80 ಕೋಟಿ ರೂಪಾಯಿಗಳಂತೆ ಒಟ್ಟು 160 ಕೋಟಿ ರೂಪಾಯಿಗಳ ವೆಚ್ಚದಲ್ಲಿ 02 ಬೆಟಾಲಿಯನ್ ಸ್ಥಾಪನೆಗೆ ಮನವಿ.

* ರಾಜ್ಯದಲ್ಲಿ 01 ಪೋಲೀಸ್ ಠಾಣೆಯ ನಿರ್ಮಾಣಕ್ಕೆ 03 ಕೋಟಿ ರೂಪಾಯಿಗಳ ವೆಚ್ಚದಂತೆ, ರಾಜ್ಯದಲ್ಲಿ ನೂತನವಾಗಿ ( ಹೊಸದಾಗಿ ) ಒಟ್ಟು 100 ಪೋಲೀಸ್ ಠಾಣೆಗಳ ನಿರ್ಮಾಣಕ್ಕೆ ಒಟ್ಟು 300 ಕೋಟಿ ರೂಪಾಯಿಗಳ ವೆಚ್ಚದ ನೆರವಿಗೆ ಮನವಿ.

* ಭಾರತ ಸರ್ಕಾರದ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ 329 ಕೋಟಿ 90 ಲಕ್ಷಗಳ ಅನುದಾನಕ್ಕೆ ಮನವಿ.
( ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ – ಗೃಹ ಇಲಾಖೆ ಅಧೀನ )

* ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿಗಳ ಆಧುನೀಕರಣಕ್ಕೆ ನೆರವು.

* ಪೋಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ನೆರವನ್ನು ಕೋರಿದರು, ಇಲಾಖೆಯ ಇನ್ನಿತರ ಪ್ರಮುಖ ಯೋಜನೆಗಳ ಬಗ್ಗೆ ಚರ್ಚಿಸಿದರು.

( ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಯ ಮಂತ್ರಿ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್, ಉಪಸ್ಥಿತರಿದ್ದರು )

Ad
Ad
Nk Channel Final 21 09 2023
Ad