Ad

ಜಲಪಾತಕ್ಕೆ ಜಾರಿ ಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು

ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈಗಾಗಲೇ 2 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತದಲ್ಲಿ ಈ ಘಟನೆ ನಡೆದಿದೆ.

ಮುಂಬೈ: ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈಗಾಗಲೇ 2 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತದಲ್ಲಿ ಈ ಘಟನೆ ನಡೆದಿದೆ.

Ad
300x250 2

ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಐವರು ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತಕ್ಕೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಈಜಾಡುವಾಗ ಜಾರಿ ಜಲಪಾತಕ್ಕೆ ಬಿದ್ದಿದ್ದಾರೆ. ಪರಿಣಾಮ ಮೇಲಿನಿಂದ ಬಿದ್ದ ರಭಸಕ್ಕೆ ಎಲ್ಲರು ಸಾವನ್ನಪ್ಪಿದ್ದಾರೆ. ಇನ್ನು 2 ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಶವಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ad
Ad
Nk Channel Final 21 09 2023
Ad