Ad

ಭಾರತ ವಿಶ್ವಕಪ್​ ಗೆಲ್ಲಲಿ ಎಂದು ಅಭಿಮಾನಿಗಳಿಂದ ಪೂಜೆ: ವಿಡಿಯೋ ವೈರಲ್

ಭಾರತ ವಿಶ್ವಕಪ್​ ಗೆಲ್ಲಲಿ ಎಂದು ಅಭಿಮಾನಿಗಳಿಂದ ಪೂಜೆ: ವಿಡಿಯೋ ವೈರಲ್

ಉತ್ತರ ಪ್ರದೇಶ: ಇಂದು ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಟಿ20 ವಿಶ್ವಕಪ್‌ ಭಾರತಕ್ಕೆ ಒಲಿಯಲಿ ಎಂಬುದು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಹಾರೈಕೆಯಾಗಿದೆ.

Ad
300x250 2

ಭಾರತ ತಂಡದ ಯಶಸ್ಸಿಗಾಗಿ ಅಭಿಮಾನಿಗಳು ಮತ್ತು ಕೆಲ ಸಾಧು ಸಂತರು ಉತ್ತರಪ್ರದೇಶದ ಪ್ರಯಾಗ್ ರಾಜ್​ನಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್​ ಆಗಿದೆ.

2013ರ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಫೈನಲ್​ನಲ್ಲಿ ಗೆದ್ದು ಭಾರತದ ಪ್ರಶಸ್ತಿ ಬರ ನೀಗಲಿ ಎನ್ನುವ ನಿಟ್ಟಿನಲ್ಲಿ ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳು ಟೀಮ್​ ಇಂಡಿಯಾ ಆಟಗಾರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ತಂಡದ ಆಟಗಾರರ ಫೋಟೊವನ್ನು ಇರಿಸಿ ಪೂಜೆ, ಭಜನೆ ಮತ್ತು ಗಂಗಾ ಪೂಜೆ ನೆರವೇರಿಸಿ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

https://x.com/ANI/status/1806888094248931468?

Ad
Ad
Nk Channel Final 21 09 2023
Ad