Bengaluru 23°C
Ad

ಮನೆಯ ಬಾತ್‌ರೂಮ್‌ ನಿಂದ ಹೊರ ಬಂದವು 35 ಹಾವುಗಳು; ವಿಡಿಯೋ ವೈರಲ್

Snack

ಅಸ್ಸಾಂ: ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಹಾವಿನ ಮರಿಗಳು ಬಾತ್‌ರೂಮ್‌ ಒಳಗಿನಿಂದ ಹೊರಬರುತ್ತಿದ್ದು, ನೋಡಿದವರು ಅಕ್ಷಶಃ ದಂಗಾಗಿದ್ದಾರೆ.

ಅಸ್ಸಾಂನ ನಗಾಂವ್ ಜಿಲ್ಲೆಯ ಮನೆಯೊಂದರಿಂದ 35 ಕ್ಕೂ ಹೆಚ್ಚು ಮರಿ ಹಾವುಗಳು ಹೊರಬರುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಭಯ ಹುಟ್ಟಿಸುವಂತಿದೆ. ಇತ್ತೀಚೆಗೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಕಲಿಯಾಬೋರ್‌ನಲ್ಲಿ ಬಾತ್‌ರೂಮ್‌ನಲ್ಲಿ ಹತ್ತಾರು ಹಾವುಗಳು ತೆವಳುತ್ತಿರವ ವಿಡಿಯೋ ಇದಾಗಿದ್ದು, ನೋಡುಗರಲ್ಲಿ ನಡುಕ ಹುಟ್ಟಿಸಿದೆ. ಈ ಹಾವುಗಳನ್ನು ಸರ್ಪೆಂಟ್ ಮ್ಯಾನ್ ಎಂದು ಕರೆಯಲಾಗುತ್ತದೆ. ಈ ಹಾವುಗಳನ್ನು ಉರಗ ರಕ್ಷಕರು ಹಿಡಿದು ಬಕೆಟ್‌ನಲ್ಲಿ ತುಂಬಿದ್ದಾರೆ.

ಈ ಕುರಿತು ಉರಗ ರಕ್ಷಕ ದೇಕಾ ಮಾತನಾಡಿ, ‘ಮನೆಯ ಮಾಲೀಕರು ಹಾವುಗಳಿರುವ ಕುರಿತು ನನಗೆ ಮಾಹಿತಿ ನೀಡಿದರು. ತಕ್ಷಣ ನಾನು ಸ್ಥಳಕ್ಕೆ ತಲುಪಿದೆ. ಸ್ಥಳದಲ್ಲಿ ಅನೇಕ ಹಾವುಗಳು ಹರಿದಾಡುತ್ತಿರುವುದನ್ನು ನಾನು ಗಮನಿಸಿದೆ. ಹೊಸದಾಗಿ ನಿರ್ಮಿಸಿದ ಮನೆಯ ಶೌಚಾಲಯದಿಂದ ಸುಮಾರು 35 ಹಾವುಗಳು ಹೊರಬಂದಿವೆ.

ನಂತರ ನಾನು ಜೋಯಸಾಗರ ದಲಾನಿ ಪ್ರದೇಶದಲ್ಲಿ ಈ ಹಾವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.‌ ತಾಯಿ ಹಾವು ಇದೇ ಬಾತ್‌ರೂಮ್‌ನಲ್ಲಿ ಮೊಟ್ಟೆ ಇಟ್ಟಿದೆ. ಮರಿಗಳು ಎಲ್ಲಿಂದಲೋ ಬಂದು ಸೇರಿಕೊಂಡಿದ್ದಲ್ಲ. ಬದಲಿಗೆ ಅಲ್ಲಿಯೇ ಜೀವ ಪಡೆದಿವೆ. ಆದರೆ ಅದನ್ನು ಮಾಲೀಕರು ನೋಡಿರಲಿಲ್ಲ. ಹಾವಿನ ಮರಿಗಳು ಹೊರಬಂದ ಬಳಿಕವಷ್ಟೇ ಅವರಿಗೆ ಈ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.

 

Ad
Ad
Nk Channel Final 21 09 2023
Ad