Bengaluru 28°C
Ad

ವಿಶ್ವಕಪ್‌ ಗೆಲುವಿನಲ್ಲಿದೆ ಕುಮಟಾದ ಪ್ರತಿಭೆಯ ಮಹತ್ವದ ಪಾತ್ರ : ಯಾರಿವರು?

2024 ನೇ ಸಾಲಿನ ಟಿ20 ವಿಶ್ವಕಪ್ ಟೀಂ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ​ . 13 ವರ್ಷಗಳಿಂದ ಕಾದು ಕೊನೆಗೆ 2024ರಲ್ಲಿ ಸೌತ್​ ಆಫ್ರಿಕಾ ವಿರುದ್ಧ 7 ರನ್​ಗಳ ಜಯ ಸಾಧಿಸಿದೆ.

2024 ನೇ ಸಾಲಿನ ಟಿ20 ವಿಶ್ವಕಪ್ ಟೀಂ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ​ . 13 ವರ್ಷಗಳಿಂದ ಕಾದು ಕೊನೆಗೆ 2024ರಲ್ಲಿ ಸೌತ್​ ಆಫ್ರಿಕಾ ವಿರುದ್ಧ 7 ರನ್​ಗಳ ಜಯ ಸಾಧಿಸಿದೆ.ಜಯದ ಹಿಂದೆ ಎಷ್ಟು ಆಟಗಾರರ ಶ್ರಮ ಇದೆಯೋ ಅಷ್ಟೇ ಶ್ರಮ ತೆರೆ ಹಿಂದಿನ ಅನೇಕ ರೂವಾರಿಗಳಿದ್ದು ಕೂಡ ಇದೆ. ಅಂತಹದರಲ್ಲಿ ಕರ್ನಾಟಕದ ಕುಮುಟಾದ ಮೂಲದ ಈ ಅದ್ಭುತ ಪ್ರತಿಭೆ ಕೂಡ ಟಿ20 ವಿಶ್ವಕಪ್​ ಗೆಲ್ಲಲು ಕಾರಣೀಭೂತರು ಎಂದರೆ ತಪ್ಪಾಗಲಾರದು

Ad
300x250 2

ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಮೂಲದವರಾದ ಹೆಸರು ರಾಘವೇಂದ್ರ ದ್ವಿಗಿ ಉವರು ಕನ್ನಡಿಗ ಎಂಬುದು ಹೆಮ್ಮೆಯ ವಿಷಯ. ವಿಶ್ವಕಪ್ ಗೆಲ್ಲಲು ಇವರ ಪಾತ್ರ ಕೂಡ ಮಹತ್ವವಾದದ್ದು ಏಕೆಂದರೆ ಇಂಡಿಯಾ ಟೀಂನ ಬ್ಯಾಟ್ಸ್​ಮನ್​ಗಳು ಚೆಂಡು ಅಭ್ಯಾಸ ಮಾಡೋದು ಮತ್ತು ವೇಗದ ಚೆಂಡನ್ನು ಎದುರಿಸಲು ಕಲಿತಿರೋದು ಇವರಿಂದಾನೆ.

ಇವರು ಬಂದ ಹಾದಿ ಸುಭವಾದದಲ್ಲ ಆದರೂ ಇವರು ಛಲ ಬಿಡದೆ ಮುನ್ನುಗ್ಗಿದ್ದಾರೆ. ಅಂದು ಕ್ರಿಕೆಟ್‌ಗಾಗಿ 21 ರೂಪಾಯಿಗೆ ಮನೆ ಬಿಟ್ಟ ಇವರು ಇಂದು ವಿಶ್ವಕಪ್‌ ಹಿಡಿದಿದ್ದಾರೆ.ಈ ಅಸಾಮಾನ್ಯ ಪ್ರತಿಭೆಗೆ ಕ್ರಿಕೆಟ್​ ಎಂದರೆ ಇನ್ನಿಲ್ಲದ ಹುಚ್ಚು. ಹೈಸ್ಕೂಲ್​ನಲ್ಲಿದ್ದಾಗ ಸದಾ ಗ್ರೌಂಡ್​ನಲ್ಲಿ ಕಾಲ ಕಳೆಯುತ್ತಿದ್ದ ಈತ ಮುಂದೊಂದು ದಿನ ಟೀಂ ಇಂಡಿಯಾದ ಥ್ರೋಡೌನ್​ ಸ್ಪೆಷಲಿಸ್ಟ್​ ಆಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲವಂತೆ.ಆದರೆ ಸಾಕಷ್ಟು ಕಷ್ಟ, ನಷ್ಟ ಅನುಭವಿಸಿ ಕೊನೆಗೆ ರಾಘವೇಂದ್ರ ದ್ವಿಗಿ 24 ವರ್ಷಗಳ ಬಳಿಕ ಟೀಂ ಇಂಡಿಯಾ ತಂಡದ ಥ್ರೋಡೌನ್​ ಸ್ಪೆಷಲಿಸ್ಟ್ ಆದರು.

ಇವರ ವಿಶೇಷತೆ ಏನು?
2011ರಲ್ಲಿ ರಾಘವೇಂದ್ರ ದ್ವಿಗಿ ಭಾರತ ತಂಡವನ್ನು ಸೇರುತ್ತಾರೆ. ಆ ನಂತರ ಟೀಂ ಇಂಡಿಯಾದ ಆಟಗಾರರಿಗೆ ಥ್ರೋಡೌನ್​ ಸ್ಪೆಷಲಿಸ್ಟ್​ ಆಗಿ ಕೆಲಸ ಮಾಡುತ್ತಾರೆ. ಇಲ್ಲಿಯವರೆಗೆ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. 150ಕೆಪಿಎಚ್​​ ವೇಗದಲ್ಲಿ ಎಸೆಯುವ ಸಾಮರ್ಥ್ಯ ಅವರಿಗಿದೆ. ಅಚ್ಚರಿ ಸಂಗತಿ ಎಂದರೆ ಇಷ್ಟು ವೇಗವಾಗಿ ಚೆಂಡು ಎಸೆಯುವ ಮತ್ತೊಬ್ಬ ಥ್ರೋಡೌನ್​ ಸ್ಪೆಷಲಿಸ್ಟ್ ಜಗತ್ತಿನಲ್ಲೇ​ ಇಲ್ಲವಂತೆ.

ಅದರಲ್ಲೂ ರೋಹಿತ್‌ ಮತ್ತು ಕೊಹ್ಲಿಯ ಸಿಕ್ಸರ್‌ಗಳಿಗೆ ಮನಸೋತವರೆ ಇಲ್ಲ ಹಾಗಾಗಿ ಹಿಟ್‌ಮ್ಯಾನ್‌, ಕಿಂಗ್‌ ಕೊಹ್ಲಿ ಎಂದು ಕರೆಯುತ್ತಾರೆ. ಆದರೆ ಅವರನ್ನು ಪ್ರಯೋಗಗಳಿಗೆ ಒಳಪಡಿಸಿ ಅದ್ಭುತ ಬ್ಯಾಟ್ಸ್​ಮನ್​ಗಳನ್ನಾಗಿ ಮಾಡಿದ ಕ್ರೆಡಿಟ್​ ನಿಜವಾಗಿಯೂ ರಾಘವೇಂದ್ರ ದ್ವಿಗಿಗೆ ಸಲ್ಲಬೇಕು.

ಕುಮಟಾದಿಂದ ಹೊರಟವರು ಹುಬ್ಬಳ್ಳಿ ಬಂದು ಸೇರುತ್ತಾರೆ. ಕೈಯಲ್ಲಿರುವ ₹21 ರೂಪಾಯಿ ಹಿಡಿದುಕೊಂಡು ಬಂದವರು ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಾರೆ. ಅಲ್ಲಿಂದ ಅವರನ್ನು ಗಮನಿಸಿ ಪೊಲೀಸರು ಓಡಿಸುತ್ತಾರೆ. ನಂತರ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ ಮಾಡುತ್ತಾರೆ. ನಂತರ ಅಲ್ಲಿಂದಲೂ ಹೋಗಬೇಕಾದ ಸ್ಥಿತಿ ಬಂದಾಗ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾರೆ.

ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡದಲ್ಲಿ ವಾಸಿಸುತ್ತಾರೆ. ಒಂದೆರಡಲ್ಲ ಬರೋಬ್ಬರಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾ ಕಾಲ ಕಳೆಯುತ್ತಾರೆ ರಾಘವೇಂದ್ರ. ಒಂದೆಡೆ ಕ್ರಿಕೆಟ್​ ಕನಸು ಮತ್ತೊಂದೆಡೆ ದಾರಿ ಹುಡುಕುತ್ತಿರುವ ರಾಘ್ರವೇಂದ್ರ. ಈ ವೇಳೆ ಕಂಡ ಕನಸಿಗೆ ದೃಷ್ಟಿ ಬಿತ್ತು ಎಂಬಂತೆ ಅವರ ಕನಸಿಗೆ ಕಲ್ಲು ಬೀಳುತ್ತದೆ. ಕಾರಣ ಬಲಗೈ ಮುರಿಯುತ್ತದೆ. ಆದರೂ ಇದಾವುದಕ್ಕೆ ಕೊರಗದೆ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾರೆ.

ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾರೆ. ಈ ವೇಳೆ ಅಲ್ಲೇ ಪರಿಚಯವಾದ ಸ್ನೇಹಿತನೋರ್ವ ಬೆಂಗಳೂರು ಬಸ್​ ತೋರಿಸುತ್ತಾನೆ. ಏನು ತಿಳಿಯದೆ ಬೆಂಗಳೂರಿಗೆ ಬಂದ ರಾಘವೇಂದ್ರ ಅವರಿಗೆ Karnataka Institute of Cricket ದಾರಿ ತೋರಿಸುತ್ತದೆ. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯಲು ಶುರು ಮಾಡುತ್ತಾರೆ.

ರಾಘವೇಂದ್ರ ದ್ವಿಗಿ ಅವರ ಪರಿಶ್ರಮ, ಕ್ರಿಕೆಟ್​ ಹುಚ್ಚು ಇವೆಲ್ಲವು ಮುಂದೊಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತದೆ. ಬಳಿಕ ತಿಲಕ್ ನಾಯ್ಡುರವರು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ರಾಘವೇಂದ್ರ ಅವರನ್ನು ಪರಿಚಯಿಸುತ್ತಾರೆ.

ರಾಘವೇಂದ್ರ ಅವರಿಗೆ ಜಾವಗಲ್​ ಶ್ರೀನಾಥ್​ ಪರಿಚಯವಾದ ಬಳಿಕ ದಿಕ್ಕೇ ಬದಲಾಯಿತು. ಕಾರಣ ಅವರನ್ನು ಕರ್ನಾಟಕ ರಣಜಿ ತಂಡದ ಜೊತೆ ಸೇರಿಸುತ್ತಾರೆ. ಕರ್ನಾಟಕ ತಂಡದದಲ್ಲಿ ರಾಘು ಕೆಲಸ ಮಾಡುತ್ತಾರೆ. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ನ್ಯಾಷನಲ್​​ ಕ್ರಿಕೆಟ್​​ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಾರೆ. ಅಚ್ಚರಿ ಸಂಗತಿ ಎಂದರೆ 3-4 ವರ್ಷ ಒಂದೇ ಒಂದು ರೂಪಾಯಿ ಹಣ ಪಡೆಯದೆ ಕೆಲಸ ಮಾಡಿದ್ದಾರೆ ರಾಘವೇಂದ್ರ

ಬಳಿಕ ರಾಘವೇಂದ್ರ ದ್ವಿಗಿಯವರು NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾರೆ.NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾರೆ. ಹೀಗೆ ಅಭ್ಯಾಸ ಮಾಡಿಸಿ ಅವರನ್ನು ಉತ್ತಮ ಬ್ಯಾಟ್ಸ್​ಮನ್​ಗಳಾಗಿ ರೂಪಿಸುತ್ತಾರೆ. ಜೊತೆಗೆ ಅವರಿಗೆ ಅಷ್ಟೇ ಆತ್ಮೀಯರಾಗಿ ಬಿಡುತ್ತಾರೆ.

ಮುಂದೊಂದಿನ ಸಚಿನ್ ತೆಂಡೂಲ್ಕರ್ ಕಣ್ಣಿಗೆ ರಾಘವೇಂದ್ರ ಬೀಳುತ್ತಾರೆ. 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಾಘವೇಂದ್ರ ನೇಮಕವಾಗುತ್ತಾರೆ. ಅಲ್ಲಿಂದ ಬಳಿಕ ಸುಮಾರು 13 ವರ್ಷಗಳ ಕಾಲ ಕೆಲಸ ಮಾಡುತ್ತಾ. ಹೀಗೆ ಸಾಗುತ್ತ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳಿಗೆ ಥ್ರೋಡೌನ್​ ಸ್ಪೆಷಲಿಸ್ಟ್​ ಆಗಿ ಸೇವೆ ಸಲ್ಲಿಸುತ್ತಾ ಬಂದರು. ಈ ವರ್ಷ ಟಿ20 ವಿಶ್ವಕಪ್​ನಲ್ಲಿ ರಾಘವೇಂದ್ರ ದ್ವಿಗಿಯವರ ಕೊಡುಗೆಯೂ ಅಪಾರವಿದೆ. ಇವರನ್ನು ಟೀಂ ಇಂಡಿಯಾದ ಕೊಹ್ಲಿ, ರೋಹಿತ್​ ನೆನಪಿಸಿಕೊಂಡದ್ದೂ ಇದೆ. ಇಷ್ಟು ಮಾತ್ರವಲ್ಲ, ಯುವರಾಜ್​ ಸಿಂಗ್, ಸುರೇಶ್​ ರೈನಾ, ಶಿಖರ್​ ಧವಾನ್​​ ಹೀಗೆ ಅನೇಕ ಕ್ರಿಕೆಟ್​ ತಾರೆಯರು ಸ್ಮರಿಸಿಕೊಂಡದ್ದೂ ಇದೆ.

 

Ad
Ad
Nk Channel Final 21 09 2023
Ad