Ad

ಬ್ಯಾಡ್ಮಿಂಟನ್ ಆಡುವಾಗ ಕಾರ್ಡಿಕ್ ಅರೆಸ್ಟ್; ಮೈದಾನದಲ್ಲೇ ಉಸಿರು ಚೆಲ್ಲಿದ ಪ್ಲೇಯರ್

Badminton

ಬ್ಯಾಡ್ಮಿಂಟನ್ ಪಂದ್ಯವಾಡುವಾಗ ಚೀನಾದ ಆಟಗಾರ ಕಾರ್ಡಿಕ್ ಅರೆಸ್ಟ್​ (ಹೃದಯ ಸ್ತಂಭನ) ನಿಂದ ಮೈದಾನದಲ್ಲೇ ಜೀವ ಬಿಟ್ಟಿರುವ ಘಟನೆಯೊಂದು ನಡೆದಿದೆ. ಇಂಡೋನೇಷ್ಯಾದಲ್ಲಿ ನಡೆದ ಇಂಟರ್​​ನ್ಯಾಷನಲ್​ ಟೂರ್ನ್​ಮೆಂಟ್​ನಲ್ಲಿ ಈ ಮನಕಲಕುವ ಘಟನೆ ನಡೆದಿದೆ.

Ad
300x250 2

ಚೀನಾದ ಬ್ಯಾಡ್ಮಿಂಟನ್ ಆಟಗಾರ ಜಾಂಗ್ ಝಿಜಿ (17) ಮೃತಪಟ್ಟ ಯುವಕ. ಇವರು ಜಪಾನ್​ನ ಕುಸುಮ ಕವಾನೊ ವಿರುದ್ಧ ಬ್ಯಾಡ್ಮಿಂಟನ್ ಪಂದ್ಯವಾಡುತ್ತಿದ್ದರು. ಇಬ್ಬರು 1-1 ಅಂಕಗಳಿಂದ ಸರಿಸಮನವಾಗಿ ಆಡುತ್ತಿದ್ದರು. ಆಗ ಕಾರ್ಡಿಕ್ ಅರೆಸ್ಟ್​ನಿಂದ ಚೀನಾದ ಪ್ಲೇಯರ್ ನೆಲಕ್ಕೆ ಬಿದ್ದಿದ್ದಾರೆ. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರು ತಕ್ಷಣಕ್ಕೆ ಆತನ ಬಳಿಗೆ ಯಾರು ಬರಲಿಲ್ಲ ಎನ್ನುವುದು ದೃಶ್ಯದಲ್ಲಿ ಸೆರೆಯಾಗಿದೆ.

ಒಬ್ಬರು ಒಳಗೆ ಬರಲು ಯತ್ನಿಸಿದಾದ್ರು ಅಂಪೈರ್ ನಿರ್ಣಯದ ಮೇರೆಗೆ ವಾಪಸ್ ಹೋದರು. ಬಳಿಕ ವೈದ್ಯಕೀಯ ತಂಡ ಆಗಮಿಸಿ ಆಟಗಾರನನ್ನ ಹೊತ್ತುಕೊಂಡು ಹೋದರು. ಆದರೆ ಅಷ್ಟೊತ್ತಿಗೆ ಜೀವ ಹೋಗಿತ್ತು ಎಂದು ಹೇಳಲಾಗಿದೆ.

Ad
Ad
Nk Channel Final 21 09 2023
Ad