Ad

ಇಂದು ಯುವ ರಾಜ್​- ಶ್ರೀದೇವಿ ಡಿವೋರ್ಸ್ ಅರ್ಜಿ ವಿಚಾರಣೆ

Sri

ಬೆಂಗಳೂರು: ರಾಜ್​ಕುಮಾರ್​ ಮೊಮ್ಮಗ ಯುವ ರಾಜ್​ಕುಮಾರ್ ಮತ್ತು ಸೊಸೆ ಶ್ರೀದೇವಿ ಭೈರಪ್ಪರವರ ವಿಚ್ಛೇದನ ಅರ್ಜಿಯನ್ನು ಕೋರ್ಟ್​ ಇಂದು ವಿಚಾರಣೆ ನಡೆಯಲಿದೆ.​ ಆದರೆ ಡಿವೋರ್ಸ್ ಅರ್ಜಿ ವಿಚಾರಣೆಗೆ ಮುನ್ನ ಶ್ರೀದೇವಿಯವರು ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿದ್ದಾರೆ.

Ad
300x250 2

ಶ್ರೀದೇವಿಯವರು ‘ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತೆ ಎಂದು ನಾನು ನಂಬಿದ್ದೇನೆ’ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ.

ನಟ ರಾಘವೇಂದ್ರ ರಾಜ್​​ಕುಮಾರ್​ರವರ ಮಗ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್​​ಗೆ ಅರ್ಜಿ ಹಾಕಿದ್ದರು. ಕೋರ್ಟ್​ ಮೆಟ್ಟಿಲೇರಿದ್ದರು. ಮಾತ್ರವಲ್ಲದೆ ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಫ್ಯಾಮಿಲಿ ಕೋರ್ಟ್​ ಮುಂದಿನ‌ ವಿಚಾರಣೆಯನ್ನ ಜುಲೈ 4ಕ್ಕೆ‌ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಲಿದೆ.

ಈಗಾಗಲೇ ಡಿವೋರ್ಸ್​ ವಿಚಾರವಾಗಿ ಶ್ರೀದೇವಿ ವಿದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಫ್ಯಾಮಿಲಿ ಕೋರ್ಟ್​ಗೆ ಹಾಜರಾಗುವ ಮೂಲಕ ವಿಚಾರಣೆ ಎದುರಿಸಲಿದ್ದಾರೆ.

Ad
Ad
Nk Channel Final 21 09 2023
Ad