Ad

ಹತ್ತು ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇವಸ್ಥಾನದಲ್ಲಿ ಕಳ್ಳತನ

Hassn

ಹಾಸನ: ನೂತನವಾಗಿ ನಿರ್ಮಾಣವಾಗಿ ಕಳೆದ ಹತ್ತು ದಿನಗಳ ಹಿಂದಷ್ಟೇ ಉದ್ಘಾಟನೆ ಗೊಂಡಿದ್ದ ದೇವಾಲಯದ ಬಾಗಿಲ ಬೀಗ ಮುರಿದು ಹುಂಡಿ ಯಲ್ಲಿದ್ದ ಹಣ ದೋಚಿ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ.

Ad
300x250 2

ಕಳೆದ ಹತ್ತು ದಿನ ಹಿಂದೆ ಶಾಸಕ ಎಚ್.ಪಿ.ಸ್ವರೂಪ್ ಹಾಗೂ ಇತರೆ ಗಣ್ಯರು ನೂತನ ನಿರ್ಮಾಣಗೊಂಡಿದ್ದ ಮಲ್ಲೇಶ್ವರ ಸ್ವಾಮಿ ದೇವಾಲಯನ್ನು ಉದ್ಘಾಟಿಸಿದ್ದರು. ಮೂರು ದಿನ ಗಳ ಕಾಲ ಪೂಜಾ ಕಾರ್ಯ ಗಳು, ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸುತ್ತಮುತ್ತಲ ಹತ್ತು ಹಳ್ಳಿಯ ಗ್ರಾಮಸ್ಥರು ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಹುಂಡಿಗೆ ಕಾಣಿಕೆ ಹಾಕಿದ್ದರಿಂದ ಹೆಚ್ಚಿನ ಪ್ರಮಾ ಣದಲ್ಲಿ ಹಣ ಸಂಗ್ರಹವಾಗಿತ್ತು. ನಿನ್ನೆ ರಾತ್ರಿ ದೇವಾಲಯದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ad
Ad
Nk Channel Final 21 09 2023
Ad