Bengaluru 22°C
Ad

ರೋಹಿತ್​ಗೆ ಆರ್​​​ಸಿಬಿ ಕ್ಯಾಪ್ಟನ್ಸಿ ಜತೆಗೆ ಮತ್ತೊಂದು ಮಹತ್ವದ ಜವಾಬ್ದಾರಿ

Rcb

ಮುಂಬೈ: ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.

Ad
300x250 2

ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರೂ ತಾನು ಐಪಿಎಲ್​ ಆಡೋದಾಗಿ ರೋಹಿತ್​​ ಹೇಳಿದ್ರು.

ಇನ್ನು, ಮುಂದಿನ ಸೀಸನ್​ ವೇಳೆಗೆ ರೋಹಿತ್​ ಮುಂಬೈ ಇಂಡಿಯನ್ಸ್​ ತೊರೆಯೋದು ಗ್ಯಾರಂಟಿ. ಆಕ್ಷನ್​​ನಲ್ಲಿ ಆರ್​​ಸಿಬಿ ರೋಹಿತ್​ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್​ ಕ್ಯಾಪ್ಟನ್​ ಆಗಲಿ, ಕೊಹ್ಲಿ ಆರ್​​ಸಿಬಿ ಪರ ಚೆನ್ನಾಗಿ ಆಡಿ ಕಪ್​ ಗೆಲ್ಲಿಸಲಿ ಎಂದು ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಟ್ರೆಂಡ್​ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆರ್​​ಸಿಬಿ ಫ್ರಾಂಚೈಸಿ ಕೂಡ ಒಂದು ವೇಳೆ ಕೊಹ್ಲಿ ಕ್ಯಾಪ್ಟನ್​​ ಆಗಲು ನಿರಾಕರಣೆ ಮಾಡಿದ್ರೆ ರೋಹಿತ್​ ಶರ್ಮಾ ಅವರನ್ನು ಬೆಂಗಳೂರು ತಂಡಕ್ಕೆ ಕರೆ ತರೋ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.

ಮುಂದಿನ ಸೀಸನ್​ಗೆ ಕೊಹ್ಲಿ ಅವರಿಗೆ ಆರ್​​ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಕೊಹ್ಲಿ ಕ್ಯಾಪ್ಟನ್​ ಆಗಲು ಒಪ್ಪದಿದ್ರೆ ರೋಹಿತ್​ ಶರ್ಮಾಗೆ ಕ್ಯಾಪ್ಟನ್ಸಿ ನೀಡಲು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ರೋಹಿತ್​ಗೆ ಕ್ಯಾಪ್ಟನ್ಸಿ ಮಾತ್ರವಲ್ಲ ತಂಡದ ಓಪನಿಂಗ್​ ಮಾಡೋ ಜವಾಬ್ದಾರಿ ಕೂಡ ಇರಲಿದೆ ಅನ್ನೊದು ಒಂದು ಕಡೆ ಫ್ಯಾನ್ಸ್‌ ಲೆಕ್ಕಾಚಾರ ಕೂಡ ಆಗಿದೆ.

Ad
Ad
Nk Channel Final 21 09 2023
Ad