Bengaluru 24°C
Ad

ಯಮುನಾ ನದಿಗೆ ನೀರನ್ನು ಹರಿಸುವಂತೆ ದೆಹಲಿ ಹರಿಯಾಣಕ್ಕೆ ಮನವಿ

ರಾಷ್ಟ್ರ ರಾಜಧಾನಿಯಲ್ಲಿನ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ಆಧಾರದ ಮೇಲೆ ಯಮುನಾ ನದಿಗೆ ಹೆಚ್ಚುವರಿ ನೀರನ್ನು ಹರಿಸುವಂತೆ ದೆಹಲಿ ಸರಕಾರವು ಹರಿಯಾಣಕ್ಕೆ ಮನವಿ ಮಾಡಿದೆ ಎಂದು ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಶನಿವಾರ ಹೇಳಿದ್ದಾರೆ.

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ಆಧಾರದ ಮೇಲೆ ಯಮುನಾ ನದಿಗೆ ಹೆಚ್ಚುವರಿ ನೀರನ್ನು ಹರಿಸುವಂತೆ ದೆಹಲಿ ಸರಕಾರವು ಹರಿಯಾಣಕ್ಕೆ ಮನವಿ ಮಾಡಿದೆ ಎಂದು ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಶನಿವಾರ ಹೇಳಿದ್ದಾರೆ.

Ad
300x250 2

ಮುನಕ್ ಕಾಲುವೆ ಮತ್ತು ವಜೀರಾಬಾದ್ ಜಲಾಶಯದಲ್ಲಿ ಕಚ್ಚಾ ನೀರಿನ ಕೊರತೆಯಿಂದಾಗಿ ರಾಜಧಾನಿಯು ಉತ್ಪಾದನೆಯಲ್ಲಿ ದಿನಕ್ಕೆ 70 ಮಿಲಿಯನ್ ಗ್ಯಾಲನ್ ಕೊರತೆಯನ್ನು ಎದುರಿಸುತ್ತಿದೆ ಎಂದು ದೆಹಲಿಯ ಜಲ ಸಚಿವೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಚ್ಚಾ ನೀರಿನ ಕೊರತೆಯಿಂದಾಗಿ ದೆಹಲಿಯಲ್ಲಿ ಸುಮಾರು 1,002 MGD ಯ ಸಾಮಾನ್ಯ ನೀರಿನ ಉತ್ಪಾದನೆಯು ಶುಕ್ರವಾರ 932 MGD ಗೆ ಇಳಿದಿದೆ ಎಂದು ಹೇಳಿದರು.

Ad
Ad
Nk Channel Final 21 09 2023
Ad